Select Your Language

Notifications

webdunia
webdunia
webdunia
webdunia

Karnataka Caste census: ಜಾತಿಗಣತಿ ಮಾಡಲು ಯಾಕೆ ಕೋಟ್ಯಾಂತರ ರೂಪಾಯಿ ಖರ್ಚಾಗುತ್ತದೆ, ಇಲ್ಲಿದೆ ಸೀಕ್ರೆಟ್

Karnataka caste census

Krishnaveni K

ಬೆಂಗಳೂರು , ಗುರುವಾರ, 12 ಜೂನ್ 2025 (09:28 IST)
Photo Credit: AI Image
ಬೆಂಗಳೂರು: ರಾಜ್ಯ ಸರ್ಕಾರ ಈಗ ಹೈಕಮಾಂಡ್ ಅಣತಿಯಂತೆ ಮತ್ತೊಮ್ಮೆ ಜಾತಿಗಣತಿ ಮಾಡಲು ಹೊರಟಿದೆ. ಆದರೆ ಜಾತಿಗಣತಿ ಅಂದರೆ ಸುಮ್ಮನೇ ಅಲ್ಲ. ಇದಕ್ಕೆ ಕೋಟ್ಯಾಂತರ ರೂಪಾಯಿ ಖರ್ಚಾಗುತ್ತದೆ. ಯಾಕೆ ಖರ್ಚಾಗುತ್ತದೆ ಇಲ್ಲಿದೆ ನೋಡಿ ವಿವರ.

10 ವರ್ಷಗಳ ಹಿಂದೆ ರಾಜ್ಯ ಸರ್ಕಾರ ಸಮಿತಿ ರಚಿಸಿ ಜಾತಿಗಣತಿ ಮಾಡಿದಾಗ ಅದಕ್ಕೆ 180 ಕೋಟಿ ರೂ. ಖರ್ಚಾಗಿದೆ ಎನ್ನಲಾಗುತ್ತದೆ. ಇದೀಗ ಮತ್ತೊಮ್ಮೆ ಜಾತಿಗಣತಿ ಮಾಡಲು 300 ಕೋಟಿ ರೂ.ವರೆಗೆ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಅಷ್ಟಕ್ಕೂ ಜಾತಿಗಣತಿಗೆ ಯಾಕೆ ಇಷ್ಟೊಂದು ಖರ್ಚು ಎಂದು ನಿಮಗೆ ಅಚ್ಚರಿಯಾಗಬಹುದು.

ಅಧಿಕಾರಿಗಳ ನೇಮಕ
ಜಾತಿಗಣತಿ ಮಾಡಲು ಪ್ರತಿಯೊಂದು ಮನೆಗೆ ಹೋಗಿ ಲೆಕ್ಕ ಪಡೆಯಬೇಕಾಗುತ್ತದೆ. ಇದಕ್ಕೆ ಅಧಿಕಾರಿಗಳನ್ನು ನೇಮಿಸಬೇಕಾಗುತ್ತದೆ. ಅವರಿಗೆ ವೇತನ ನೀಡಲು ಖರ್ಚು ವೆಚ್ಚವಾಗುತ್ತದೆ.

ಅಧಿಕಾರಿಗಳಿಗೆ ಸೌಲಭ್ಯ
ಜಾತಿ ಗಣತಿ ಮಾಡಲು ತೆರಳುವ ಸಿಬ್ಬಂದಿಗಳಿಗೆ ವಾಹನ ಸೌಲಭ್ಯ ಬೇಕಾಗಿದ್ದಲ್ಲಿ, ಊಟೋಪಚಾರ, ಕಂಪ್ಯೂಟರ್, ಡಿಜಿಟಲ್ ಸೌಲಭ್ಯಕ್ಕಾಗಿ ಖರ್ಚು ವೆಚ್ಚವಾಗುತ್ತದೆ.

ಆನ್ ಲೈನ್ ಖರ್ಚುಗಳು
ಒಂದು ವೇಳೆ ಆನ್ ಲೈನ್ ಮೂಲಕ ಗಣತಿ ಮಾಡುವುದಿದ್ದರೆ ಪ್ರತ್ಯೇಕ ಆಪ್ ನಿರ್ಮಿಸಲು, ಅದರ ದತ್ತಾಂಶಗಳನ್ನು ಸಂಗ್ರಹಿಸಲು ಐಟಿ ಮೂಲಭೂತಸೌಕರ್ಯ ಒದಗಿಸಲು ಖರ್ಚು ವೆಚ್ಚಗಳಾಗುತ್ತವೆ. ಇದನ್ನು ನಿರ್ವಹಿಸಲು ನುರಿತ ಸಿಬ್ಬಂದಿಗಳನ್ನು ನೇಮಿಸಬೇಕಾಗುತ್ತದೆ.

ಕಾಗದ ಪತ್ರಗಳ ಮುದ್ರಣ
ಒಂದು ವೇಳೆ ಫಾರಂ ಫಿಲ್ ಮಾಡುವ ಪದ್ಧತಿಯಾಗಿದ್ದರೆ ಅದನ್ನು ಪ್ರಿಂಟ್ ಮಾಡಲು, ದಾಖಲೆಗಳನ್ನು ತಯಾರಿ ಮಾಡಲು ಖರ್ಚು ವೆಚ್ಚಗಳಾಗುತ್ತವೆ.

ಜಾಹೀರಾತುಗಳು
ಸಾರ್ವಜನಿಕರಲ್ಲಿ ಜಾತಿಗಣತಿ ಬಗ್ಗೆ ಅರಿವು ಮೂಡಿಸಲು ಸೋಷಿಯಲ್ ಮೀಡಿಯಾ ಸಂದೇಶ, ಜಾಹೀರಾತುಗಳನ್ನು ನಿರ್ಮಿಸಬೇಕಾಗುತ್ತದೆ. ಇದಕ್ಕೆ ಖರ್ಚು ವೆಚ್ಚಗಳಾಗುತ್ತವೆ.

ಇವೆಲ್ಲದರ ಜೊತೆಗೆ ಸಂಗ್ರಹಿಸಿದ ದಾಖಲೆಗಳನ್ನು ಒಟ್ಟುಗೂಡಿಸಿ ಅವುಗಳ ಮಾಹಿತಿಯ ಅನ್ವಯ ವರದಿ ತಯಾರಿಸುವುದು, ಅದನ್ನು ಸಂಗ್ರಹಿಸಿಡಲು ಸೂಕ್ತ ವ್ಯವಸ್ಥೆ ಮಾಡಬೇಕಾಗುತ್ತದೆ. ಇದೆಲ್ಲವೂ ವೆಚ್ಚದಾಯಕವಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

Chinnaswamy stampede: ವಿರಾಟ್ ಕೊಹ್ಲಿ ಸ್ನೇಹಿತನ ಭವಿಷ್ಯ ಇಂದು ನಿರ್ಧಾರ