Select Your Language

Notifications

webdunia
webdunia
webdunia
webdunia

Karnataka Caste census report: 30 ವರ್ಷಗಳ ಮುಸ್ಲಿಮರ ಜನ ಸಂಖ್ಯೆ ಶೇ 90 ರಷ್ಟು ಹೆಚ್ಚು

Siddaramaiah

Krishnaveni K

ಬೆಂಗಳೂರು , ಮಂಗಳವಾರ, 22 ಏಪ್ರಿಲ್ 2025 (09:20 IST)
ಬೆಂಗಳೂರು: ಕರ್ನಾಟಕ ಜಾತಿ ಗಣತಿ ವರದಿ ಪ್ರಕಾರ ಕಳೆದ 30 ವರ್ಷಗಳ ಮುಸ್ಲಿಮರ ಜನಸಂಖ್ಯೆಯಲ್ಲಿ ಶೇ.90 ರಷ್ಟು ಹೆಚ್ಚಳವಾಗಿದೆ ಎಂದು ಉಲ್ಲೇಖವಾಗಿದೆ.

1984 ರಲ್ಲಿ ವೆಂಕಟಸ್ವಾಮಿ ಆಯೋಗ ಸಮೀಕ್ಷೆ ನಡೆಸಿದ್ದಾಗ ರಾಜ್ಯದಲ್ಲಿ ಲಿಂಗಾಯತರ ಸಂಖ್ಯೆ ನಂ.1 ಸ್ಥಾನದಲ್ಲಿತ್ತು. 2015 ರ ಕಾಂತರಾಜು ಸಮೀಕ್ಷೆಯ ಪ್ರಕಾರ 66 ಲಕ್ಷ ಜನಸಂಖ್ಯೆಯೊಂದಿಗೆ ಲಿಂಗಾಯತರ ಸಂಖ್ಯೆ ಮೂರನೇ ಸ್ಥಾನಕ್ಕಿಳಿದಿದೆ. 57 ಲಕ್ಷವಿದ್ದ ಎಸ್ ಸಿ ಸಮುದಾಯ 1 ಕೋಟಿಗೆ ತಲುಪಿದ್ದು ಶೇ.90 ರಷ್ಟು ಹೆಚ್ಚಳವಾಗಿದೆ.

1984 ರ ಸಮೀಕ್ಷೆಯಲ್ಲಿ ಮುಸ್ಲಿಮರ ಜನಸಂಖ್ಯೆ ಕೇವಲ 39 ಲಕ್ಷಗಳಿತ್ತು. ಆದರೆ ಇದೀಗ ಕಾಂತರಾಜು ಸಮೀಕ್ಷೆ ಪ್ರಕಾರ 76 ಲಕ್ಷಕ್ಕೆ ಏರಿಕೆಯಾಗಿದೆ. ಅಂದರೆ ಮುಸ್ಲಿಮ್ ಜನಸಂಖ್ಯೆಯಲ್ಲಿ ಶೇ.94 ರಷ್ಟು ಏರಿಕೆಯಾಗಿದೆ ಎಂದು ಜಾತಿಗಣತಿಯಲ್ಲಿ ವರದಿ ನೀಡಲಾಗಿದೆ.

ಪರಿಶಿಷ್ಠ ಜಾತಿಗಳು ನಂ.1 ಸ್ಥಾನದಲ್ಲಿದ್ದು, ಮುಸ್ಲಿಮರು ನಂ.2 ಮತ್ತು ಲಿಂಗಾಯತರು ನಂ.3 ನೇ ಸ್ಥಾನದಲ್ಲಿದ್ದಾರೆ. ಇತರೆ ಸಮುದಾಯಗಳು ನಿಧಾನಗತಿಯಲ್ಲಿ ಏರಿಕೆಯಾಗುತ್ತಿದೆ. ಆದರೆ ಮುಸ್ಲಿಂ ಸಮುದಾಯ ಮಾತ್ರ ದಿಡೀರ್ ಏರಿಕೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Rain: ಕರ್ನಾಟಕದಲ್ಲಿ ಮುಂದಿನ ಮೂರು ದಿನಗಳಿಗೆ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ