Select Your Language

Notifications

webdunia
webdunia
webdunia
webdunia

Karnataka caste census: ಜಾತಿಗಣತಿ ವರದಿಯಿಂದ ಹೀಗಾಗಿದೆ ಸಾರ್ ಎಂದು ರಾಹುಲ್ ಗಾಂಧಿಗೆ ವರದಿ ಒಪ್ಪಿಸಲು ತಯಾರಿ

Rahul Gandhi

Krishnaveni K

ಬೆಂಗಳೂರು , ಶನಿವಾರ, 19 ಏಪ್ರಿಲ್ 2025 (10:49 IST)
ಬೆಂಗಳೂರು: ಕರ್ನಾಟಕದಲ್ಲಿ ಜಾತಿಗಣತಿ ವರದಿ ಜಾರಿಗೆ ತರುವ ನಿಟ್ಟಿನಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಭಾರೀ ವಿರೋಧ ಕಂಡುಬಂದಿತ್ತು. ಈ ಹಿನ್ನಲೆಯಲ್ಲಿ ಇದರ ಬಗ್ಗೆ ಎಲ್ಲಾ ಸಚಿವರ ಅಭಿಪ್ರಾಯವನ್ನು ನೇರವಾಗಿ ರಾಹುಲ್ ಗಾಂಧಿಗೆ ಸಲ್ಲಿಕೆ ಮಾಡಲು ರಾಜ್ಯ ನಾಯಕರು ಸಿದ್ಧತೆ ನಡೆಸಿದ್ದಾರೆ.

ಜಾತಿಗಣತಿ ಮಾಡಬೇಕು ಎಂಬುದು ರಾಹುಲ್ ಗಾಂಧಿ ಕನಸು. ಈಗಾಗಲೇ ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲಿ ಜಾತಿಗಣತಿ ವರದಿ ಜಾರಿಗೆ ತರಲಾಗಿದೆ. ಇದೀಗ ಕರ್ನಾಟಕದಲ್ಲೂ ಜಾತಿಗಣತಿ  ವರದಿ ಜಾರಿಗೆ ತರಲು ಸಿದ್ಧತೆ ನಡೆದಿತ್ತು.

ಆದರೆ ಈಗಾಗಲೇ ಸಿದ್ಧವಾಗಿರುವ ವರದಿ ಬಗ್ಗೆ ಸಚಿವರಲ್ಲೇ ಅಸಮಾಧಾನಗಳಿವೆ. ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ವರದಿ ಬಗ್ಗೆ ಸಚಿವರಿಂದ ತೀವ್ರ ಆಕ್ಷೇಪ ಕಂಡುಬಂದಿತ್ತು. ತಮ್ಮ ತಮ್ಮ ಸಮುದಾಯದ ಪರ ಎಲ್ಲಾ ಸಚಿವರು ಬ್ಯಾಟ್ ಬೀಸಿದ್ದರು.

ಹೀಗಾಗಿ ಈಗ ಸಿಎಂ ಸಿದ್ದರಾಮಯ್ಯ ಎಲ್ಲಾ ನಾಯಕರಿಗೆ ಲಿಖಿತ ರೂಪದಲ್ಲಿ ತಮ್ಮ ಅಭಿಪ್ರಾಯ ತಿಳಿಸುವಂತೆ ಸೂಚನೆ ನೀಡಿದ್ದಾರೆ. ಇದನ್ನು ರಾಹುಲ್ ಗಾಂಧಿಗೆ ರವಾನಿಸುವ ಸಾಧ್ಯತೆಯಿದೆ. ಬಳಿಕ ಅವರ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆಯಿಡುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Gold price today: ಚಿನ್ನದ ಬೆಲೆ ಇಂದು ಎಷ್ಟಾಗಿದೆ ನೋಡಿ