Select Your Language

Notifications

webdunia
webdunia
webdunia
webdunia

Gold price today: ಚಿನ್ನದ ಬೆಲೆ ಇಂದು ಎಷ್ಟಾಗಿದೆ ನೋಡಿ

Gold

Krishnaveni K

ಬೆಂಗಳೂರು , ಶನಿವಾರ, 19 ಏಪ್ರಿಲ್ 2025 (10:21 IST)
ಬೆಂಗಳೂರು: ನಿನ್ನೆ ವಿಪರೀತ ಏರಿಕೆಯಾಗಿದ್ದ ಚಿನ್ನದ ದರ ಇಂದು ಯಥಾಸ್ಥಿತಿಯಲ್ಲಿದೆ. ಹಾಗಂತ ಖರೀದಿದಾರರು ನೆಮ್ಮದಿಯಾಗುವಂತಿಲ್ಲ. ಯಾಕೆಂದರೆ ನಿನ್ನೆಯೇ ದಾಖಲೆಯ ಏರಿಕೆ ಕಂಡಿತ್ತು. ಇಂದು ಪರಿಶುದ್ಧ ಚಿನ್ನದ ದರ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
99.9 ಶುದ್ಧತೆಯ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಲೇ ಇತ್ತು. ಇಂದೂ ಯಥಾಸ್ಥಿತಿಯಲ್ಲಿದೆ. ನಿನ್ನೆ ಚಿನ್ನದ ಬೆಲೆ ಗಗನಕ್ಕೇರಿತ್ತು. ಇಂದೂ ಪರಿಶುದ್ಧ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆ ಪರಿಶುದ್ಧ ಚಿನ್ನದ ಬೆಲೆ  97, 995 ರೂ.ಗಳಷ್ಟಾಗಿತ್ತು. ಇಂದೂ ಯಥಾಸ್ಥಿತಿಯಲ್ಲಿದೆ.

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಹೆಚ್ಚು-ಕಡಿಮೆ ಆಗಿಲ್ಲ. ಇಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತೀ ಗ್ರಾಂಗೆ 8,945 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು 9,758 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಂಗೆ 7,319 ರೂ. ರಷ್ಟಾಗಿದೆ.

ಬೆಳ್ಳಿ ದರ
ಬೆಳ್ಳಿ ದರವೂ ನಿರಂತರವಾಗಿ ಏರಿಕೆಯಾಗುತ್ತಲೇ ಇತ್ತು.  ಇಂದು ಮತ್ತೆ ಬೆಳ್ಳಿ ಬೆಲೆ ಲಕ್ಷದ ಗಡಿ ತಲುಪಿದೆ. ನಿನ್ನೆ 100 ರೂ.ಗಳಷ್ಟು ಇಳಿಕೆಯಾಗಿದ್ದು ಪ್ರತೀ ಕೆ.ಜಿ. ಬೆಳ್ಳಿ ಬೆಲೆ ಇಂದು 99,900 ರೂ.ಗಳಾಗಿತ್ತು. ಇಂದು ಮತ್ತೆ 1,00,000 ರೂ.ಗಳಾಗಿವೆ. ಕಳೆದ ಎರಡು ತಿಂಗಳಿನಿಂದ ಬೆಳ್ಳಿ ಬೆಲೆಯಲ್ಲೂ ದಿನೇ ದಿನೇ ಏರಿಕೆಯಾಗುತ್ತಲೇ ಇತ್ತು.

Share this Story:

Follow Webdunia kannada

ಮುಂದಿನ ಸುದ್ದಿ

Karnataka caste census: ದೇಶದ ಪ್ರಮುಖ ನಾಯಕರ ಜಾತಿ, ಸಮುದಾಯ ಯಾವುದು ಇಲ್ಲಿದೆ ವಿವರ