ನವದೆಹಲಿ: ಕರ್ನಾಟಕದಲ್ಲಿ ಈಗ ಜಾತಿಗಣತಿ ವರದಿ ವಿಚಾರ ಭಾರೀ ಸದ್ದು ಮಾಡುತ್ತಿದೆ. ಇದೇ ಸಂದರ್ಭದಲ್ಲಿ ದೇಶದ ಪ್ರಮುಖ ನಾಯಕರ ಜಾತಿ ಯಾವುದು ಮತ್ತು ಯಾವ ಸಮುದಾಯಕ್ಕೆ ಸೇರಿದವರು ಎಂಬ ವಿವರ ನೋಡೋಣ.
ರಾಷ್ಟ್ರಪತಿ ದ್ರೌಪದಿ ಮುರ್ಮು: ಆದಿವಾಸಿ ಬುಡಕಟ್ಟು ಜನಾಂಗಕ್ಕೆ ಸೇರಿದ ದ್ರೌಪದಿ ಮುರ್ಮು ದೇಶದ ಉನ್ನತ ಸ್ಥಾನಕ್ಕೇರಿದ ಹೆಮ್ಮೆಯ ಮಹಿಳೆ.
ಪ್ರಧಾನಿ ನರೇಂದ್ರ ಮೋದಿ: ಗುಜರಾತ್ ನ ವಡ್ನಾನಗರ್ ನಲ್ಲಿ ಜನಿಸಿದ್ದ ಮೋದಿ ಹಿಂದೂ ಒಬಿಸಿ ಸಮುದಾಯಕ್ಕೆ ಸೇರಿದವರು. 2000 ರಲ್ಲಿ ಮೋದಿಯವರ ಜಾತಿ ವರ್ಗವನ್ನೂ ಹಿಂದುಳಿದ ವರ್ಗಕ್ಕೆ ಸೇರ್ಪಡೆಗೊಳಿಸಿತ್ತು.
ಅಮಿತ್ ಶಾ: ಗುಜರಾತ್ ನ ಹಿಂದೂ ಧರ್ಮದ ಬನಿಯಾ ಸಮುದಾಯದವರಾಗಿದ್ದಾರೆ. ಅಮಿತ್ ಶಾ ಪೂರ್ವಜರು ಗುಜರಾತ್ ನವರೇ. ಆದರೆ ಅವರು ಹುಟ್ಟಿದ್ದು ಮುಂಬೈನಲ್ಲಿ.
ನಿರ್ಮಲಾ ಸೀತಾರಾಮನ್: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮಿಳುನಾಡು ಮಧುರೈ ಮೂಲದ ಅಯ್ಯಂಗಾರ್ ಸಮುದಾಯದವರು.
ಮಲ್ಲಿಕಾರ್ಜುನ ಖರ್ಗೆ: ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನಲ್ಲಿ ಜನಿಸಿದ ಮಲ್ಲಿಕಾರ್ಜುನ ಖರ್ಗೆ ದಲಿತ ಸಮುದಾಯಕ್ಕೆ ಸೇರಿದವರು.
ರಾಹುಲ್ ಗಾಂಧಿ: ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ತಮ್ಮ ಜಾತಿ ಗುಟ್ಟು ಇದುವರೆಗೆ ಸ್ಪಷ್ಟವಾಗಿ ಬಿಟ್ಟುಕೊಟ್ಟಿಲ್ಲ. ಹಿಂದೊಮ್ಮೆ ತಾನು ಕಾಶ್ಮೀರಿ ಕೌಲ್ ಬ್ರಾಹ್ಮಣ ಎಂದಿದ್ದರು. ಮಗದೊಮ್ಮೆ ನನಗೆ ಯಾವುದೇ ಜಾತಿಯಿಲ್ಲ ಎಂದಿದ್ದರು.
ಸಿದ್ದರಾಮಯ್ಯ: ಸಿದ್ದರಾಮಯ್ಯನವರು ಕುರುಬ ಗೌಡ ಜನಾಂಗಕ್ಕೆ ಸೇರಿದವರು. ಅವರನ್ನು ಕುರುಬರ ನಾಯಕ ಎಂದೇ ಹೇಳಲಾಗುತ್ತದೆ.
ಡಿಕೆ ಶಿವಕುಮಾರ್: ಕರ್ನಾಟಕದ ಪ್ರಮುಖ ಸಮುದಾಯಗಳಲ್ಲಿ ಒಂದಾದ ಒಕ್ಕಲಿಗ ಸಮುದಾಯಕ್ಕೆ ಸೇರಿದವರು.
ಎಚ್ ಡಿ ಕುಮಾರಸ್ವಾಮಿ: ಕೇಂದ್ರ ಸಚಿವರಾಗಿರುವ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕೂಡಾ ಒಕ್ಕಲಿಗ ಸಮುದಾಯಕ್ಕೆ ಸೇರಿದವರು.
ಬಿಎಸ್ ಯಡಿಯೂರಪ್ಪ: ಯಡಿಯೂರಪ್ಪ ಆಂಡ್ ಕುಟುಂಬ ರಾಜ್ಯದ ಮತ್ತೊಂದು ಪ್ರಮುಖ ಸಮುದಾಯವಾದ ಲಿಂಗಾಯತ ಸಮುದಾಯಕ್ಕೆ ಸೇರಿದವರು.