ಬೆಂಗಳೂರು: ಹಿಂದೂಗಳಲ್ಲಿ ಮಾತ್ರ ಜಾತಿ, ಉಪಜಾತಿ ಇರೋದಾ, ಮುಸ್ಲಿಮರಲ್ಲಿ ಯಾವುದೇ ಜಾತಿ ಇಲ್ವಾ? ಜಾತಿ ಗಣತಿಯಲ್ಲಿ ಮುಸ್ಲಿಮರನ್ನೆಲ್ಲಾ ಒಂದೇ ಜಾತಿ ಎಂದು ವರ್ಗೀಕರಿಸಿ ಅವರ ಸಂಖ್ಯೆಯೇ ಅತೀ ಹೆಚ್ಚಿದೆ ಎಂದು ಬಿಂಬಿಸಲಾಗಿದೆ ಎಂದು ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ರಾಜ್ಯ ಸರ್ಕಾರ ಜಾತಿಗಣತಿ ಮಾಡಲು ಮುಂದಾಗಿದೆ. ಈಗಾಗಲೇ ಇದರ ವರದಿ ಸೋರಿಕೆಯಾಗಿದೆ. ಆ ಪ್ರಕಾರ ಮುಸ್ಲಿಮರೇ ನಂ.1 ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಲಿಂಗಾಯಿತರಿದ್ದಾರೆ. ಈ ವರದಿ ಬಗ್ಗೆ ಬಿಜೆಪಿ ಅಪಸ್ವರವೆತ್ತಿದೆ.
ಮುಸ್ಲಿಮ್ ಎನ್ನುವುದು ಜಾತಿ ಅಲ್ಲ ಅದೊಂದು ಧರ್ಮ. ಹಿಂದೂ ಧರ್ಮದ ಜಾತಿಗಳನ್ನು ಮಾತ್ರ ಪ್ರತ್ಯೇಕ ಮಾಡಿ ಗಣತಿ ಮಾಡಿರುವ ಸರ್ಕಾರ ಮುಸ್ಲಿಮರಲ್ಲಿ ಹಲವು ಪಂಗಡಗಳಿದ್ದರೂ ಒಂದೇ ಪಂಗಡವೆಂದು ಪರಿಗಣಿಸಿ ವರದಿ ನೀಡುವ ಮೂಲಕ ಮುಸ್ಲಿಮರಿಗೇ ಬಹುಪಾಲು ನೀಡಲು ಮುಂದಾಗಿದೆ ಎನ್ನುವುದು ಬಿಜೆಪಿ ಆರೋಪವಾಗಿದೆ.
ಈಗಿನ ವರದಿ ಪ್ರಕಾರ ಮುಸ್ಲಿಮರು ಬಹುಸಂಖ್ಯಾತರು. ಹಾಗಿದ್ದರೆ ಅವರಿಗೆ ಅಲ್ಪಸಂಖ್ಯಾತರ ಸೌಲಭ್ಯ ಯಾಕೆ? ಮುಸ್ಲಿಮರ ಸಂಖ್ಯೆ ಹೆಚ್ಚು ಎಂದು ತೋರಿಸಿ ಇತರರಿಗೆ ಅನ್ಯಾಯ ಮಾಡಿದ್ದೀರಿ. ಇದು ಅಲ್ಪಾಯುಷಿ ಸರ್ಕಾರ. ಹೆಚ್ಚು ದಿನ ಬಳಿಕೆ ಬರಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.