Select Your Language

Notifications

webdunia
webdunia
webdunia
webdunia

Gold price today: ಲಕ್ಷದ ಅಂಚಿಗೆ ಬಂದು ನಿಂತ ಚಿನ್ನದ ಬೆಲೆ ಎಷ್ಟಾಗಿದೆ ನೋಡಿ

Gold
ಬೆಂಗಳೂರು: ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದೆ. ಇಂದಂತೂ ಚಿನ್ನದ ಬೆಲೆ ದಾಖಲೆ ಮಟ್ಟಕ್ಕೆ ತಲುಪಿದ್ದು ಲಕ್ಷ ತಲುಪಲು ಇನ್ನೇನು ಕೆಲವೇ ಹೆಜ್ಜೆ ಬಾಕಿ ಎನ್ನುವಂತಿದೆ. ಇಂದು ಪರಿಶುದ್ಧ ಚಿನ್ನದ ದರ ಎಷ್ಟು ಏರಿಕೆಯಾಗಿದೆ ಎಂಬ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
99.9 ಶುದ್ಧತೆಯ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಲೇ ಇತ್ತು.ಇಂದು ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಕಳೆದ ಎರಡುದಿನಗಳಿಂದಲೂ ಚಿನ್ನದ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇತ್ತು. ಆದರೆ ಇಂದಂತೂ ಗಗನ ಕುಸುಮವಾಗಿದೆ. ಎಲ್ಲಾ ದಾಖಲೆಗಳನ್ನೂ ಮೀರಿ ಏರಿಕೆಯಾಗಿದೆ. ನಿನ್ನೆ ಪರಿಶುದ್ಧ ಚಿನ್ನದ ಬೆಲೆ 96, 610 ರೂ.ಗಳಾಗಿತ್ತು. ಇಂದು ಏಕಾಏಕಿ 4 ಸಾವಿರ ರೂ. ಏರಿಕೆಯಾಗಿದ್ದು, 97, 000 ರೂ.ಗೆ ಬಂದು ನಿಂತಿದೆ. ಇದು ಇತ್ತೀಚೆಗಿನ ದಿನಗಳಲ್ಲೇ ದಾಖಲೆಯಾಗಿದೆ.

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಂದು ಯಥಾ ಸ್ಥಿತಿಯಲ್ಲಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತೀ ಗ್ರಾಂಗೆ 8,770 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಂದು 9,567 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಗ್ರಾಂಗೆ 7,176 ರೂ. ರಷ್ಟಾಗಿದೆ.

ಬೆಳ್ಳಿ ದರ
ಬೆಳ್ಳಿ ದರವೂ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ನಿನ್ನೆ ಭಾರೀ ಏರಿಕೆಯಾಗಿದೆ. ನಿನ್ನೆ ಬೆಳ್ಳಿ ದರ ಪ್ರತೀ ಕೆ.ಜಿ.ಗೆ 2,900  ರೂಗಳಷ್ಟು ಏರಿಕೆಯಾಗಿತ್ತು. ಇಂದು ಬೆಲೆ ಯಥಾ ಸ್ಥಿತಿಯಲ್ಲಿದೆ. ಪ್ರತೀ ಕೆ.ಜಿ.ಗೆ 1,00,000 ರೂ.ಗೆ ಬಂದು ನಿಂತಿದೆ. ಕಳೆದ ಎರಡು ತಿಂಗಳಿನಿಂದ ಬೆಳ್ಳಿ ಬೆಲೆಯಲ್ಲೂ ದಿನೇ ದಿನೇ ಏರಿಕೆಯಾಗುತ್ತಲೇ ಇತ್ತು.

Share this Story:

Follow Webdunia kannada

ಮುಂದಿನ ಸುದ್ದಿ

Tehawwur Rana: ಎನ್ ಐಎ ಕಸ್ಟಡಿಯಲ್ಲಿ ಮೂರು ವಸ್ತುಗಳಿಗೆ ಬೇಡಿಕೆಯಿಟ್ಟ ಉಗ್ರ ತಹವ್ವೂರ್ ರಾಣಾ