ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಕೋತಿಯೊಂದು ಮಗುವಿನ ಮೇಲೆ ಕೂತು ಮಾಡಿದ ಕೆಲಸವೊಂದು ವೈರಲ್ ಆಗಿದ್ದು, ಸಾಕಷ್ಟು ಫನ್ನಿ ಕಾಮೆಂಟ್ ಗಳು ಬಂದಿವೆ.
ಪ್ರತಿನಿತ್ಯ ಸೋಷಿಯಲ್ ಮೀಡಿಯಾದಲ್ಲಿ ಫನ್ನಿ ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಅದರಲ್ಲೂ ಕೋತಿಯಾಟ ಎಂದರೆ ಕೇಳಬೇಕೇ? ಇಂತಹದ್ದೊಂದು ಕೋತಿಯ ಮಂಗನಾಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿದೆ.
ಮಗುವೊಂದು ತನ್ನ ಪೋಷಕರೊಂದಿಗೆ ಟೆರೇಸ್ ನಲ್ಲಿ ಅಂಬೆಗಾಲಿಡುತ್ತಾ ತನ್ನ ಪಾಡಿಗೆ ಆಡುತ್ತಿರುತ್ತದೆ. ಈ ವೇಳೆ ಟೆರೇಸ್ ಮೇಲೆ ಬಂದ ಮಂಗನನ್ನು ನೋಡಿ ಮಗು ಬಳಿ ಹೋಗುತ್ತದೆ. ಕುತೂಹಲದಿಂದ ತೀರಾ ಸನಿಹ ಬಂದು ನೋಡಿದಾಗ ಮಗುವಿನ ತಲೆ ಮೇಲಿದ್ದ ಟೋಪಿಯನ್ನು ಕೋತಿ ಹಿಡಿದು ಎಳೆಯಲು ಯತ್ನಿಸುತ್ತದೆ.
ತಕ್ಷಣ ಮಗು ಅಲ್ಲಿಂದ ಹಿಂದೆ ಅಂಬೆಗಾಲಿಡುತ್ತಾ ಬರುವಾಗ ಬೆನ್ನಿನ ಮೇಲೆ ಕೂತು ಮಂಗ ಮಾಡಿದ ಚೇಷ್ಠೆ ಎಲ್ಲರ ಗಮನ ಸೆಳೆದಿದೆ. ಸದ್ಯ ಮಗು ದೊಡ್ಡದೊಂದು ಮಾನಹಾನಿಯಿಂದ ಸದ್ಯದಲ್ಲೇ ಬಚಾವ್ ಆಗಿದೆ ಎಂದು ವಿಡಿಯೋ ಪ್ರಕಟಿಸಿದ ವ್ಯಕ್ತಿ ತಮಾಷೆ ಮಾಡಿದ್ದಾರೆ. ಈ ಫನ್ನಿ ವಿಡಿಯೋ ಇಲ್ಲಿದೆ ನೋಡಿ.