Daily Horoscope

Select Your Language

Notifications

webdunia
webdunia
webdunia
webdunia

T20 WC Final: ಫೈನಲ್ ಹಿಂದಿನ ದಿನವೂ ಅವರು ಕರೆ ಮಾಡಿದ್ದರು: ಸಹಾಯ ಮಾಡಿದ ವ್ಯಕ್ತಿಯ ನೆನೆಸಿದ ಸಂಜು ಸ್ಯಾಮ್ಸನ್

Sanju Samson T20 WC Final
Photo Credit: X
ಅಹ್ಮದಾಬಾದ್: ಈ ಟಿ20 ವಿಶ್ವಕಪ್ ನಲ್ಲಿ ತಮ್ಮ ಭರ್ಜರಿ ಪ್ರದರ್ಶನಕ್ಕೆ ಕಾರಣ ಯಾರು ಎಂದು ಟೀಂ ಇಂಡಿಯಾ ಆರಂಭಿಕ ಸಂಜು ಸ್ಯಾಮ್ಸನ್ ಬಹಿರಂಗಪಡಿಸಿದ್ದಾರೆ.

ಟಿ20 ವಿಶ್ವಕಪ್ ಗೆ ಮೊದಲು ನಡೆದಿದ್ದ ನ್ಯೂಜಿಲೆಂಡ್  ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಪರ ಆರಂಭಿಕರಾಗಿ ಮೂರು ಪಂದ್ಯಗಳಲ್ಲಿ ಅವಕಾಶ ಪಡೆದಿದ್ದರೂ ಕಳಪೆ ಪ್ರದರ್ಶನ ನೀಡಿ ಸಂಜು ತೀರಾ ಟೀಕೆಗೆ ಗುರಿಯಾಗಿದ್ದರು. ಈ ಆಟಗಾರನನ್ನು ಟಿ20 ವಿಶ್ವಕಪ್ ತಂಡದಲ್ಲಿ ಯಾಕೆ ಹಾಕಿದ್ರು ಎಂದು ಅಭಿಮಾನಿಗಳೇ ಹಿಡಿಶಾಪ ಹಾಕಿದ್ದರು.

ಆದರೆ ಈ ಟಿ20 ವಿಶ್ವಕಪ್ ನಲ್ಲಿ ತಮಗೆ ಅವಕಾಶ ಸಿಕ್ಕಾಗ ಸಂಜು ಅದನ್ನು ಅದ್ಭುತವಾಗಿ ನಿಭಾಯಿಸಿದ್ದು, ಕೊನೆಯಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಅವಾರ್ಡ್ ಪಡೆದಿದ್ದಾರೆ. ಅದರಲ್ಲೂ ಸೂಪರ್ 8, ಸೆಮಿಫೈನಲ್ ಮತ್ತು ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ಬೃಹತ್ ಮೊತ್ತಕ್ಕೆ ಅವರ ಹೊಡೆಬಡಿಯ ಅರ್ಧಶತಕವೇ ಕಾರಣವಾಗಿದೆ.

ತಮ್ಮ ಈ ಭರ್ಜರಿ ಪ್ರದರ್ಶನಕ್ಕೆ ಕಾರಣವೇನು ಎಂದು ಅವರು ನಿನ್ನೆ ಪ್ರಶಸ್ತಿ ಸ್ವೀಕರಿಸಿದ ಬಳಿಕ ಬಹಿರಂಗಪಡಿಸಿದ್ದಾರೆ. ‘ನಾನು ರನ್ ಗಳಿಸದೇ ಇದ್ದಾಗ ಸಾಕಷ್ಟು ಹಿರಿಯ ಆಟಗಾರರು ನನಗೆ ಸಹಾಯ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ನಾನು ಫಾರ್ಮ್ ಕಳೆದುಕೊಂಡಾಗ ಏನು ಮಾಡಬೇಕು ಎಂದು ತೋಚದೇ ಇದ್ದಾಗ ಸಚಿನ್ ಸರ್ (ಸಚಿನ್ ತೆಂಡುಲ್ಕರ್) ಗೆ ಕರೆ ಮಾಡಿದ್ದೆ. ಸಾಕಷ್ಟು ಬಾರಿ ಅವರೊಂದಿಗೆ ಮಾತನಾಡಿ ಏನು ಮಾಡಬಹುದು ಎಂದು ಚರ್ಚಿಸಿದ್ದೆ. ಅವರು ನನಗೆ ಸಾಕಷ್ಟು ಸಲಹೆ ನೀಡಿದ್ದಾರೆ. ಫೈನಲ್ ಪಂದ್ಯಕ್ಕೆ ಮುನ್ನವೂ ಅವರು ನನಗೆ ಕರೆ ಮಾಡಿ ಸಂಜು ಹೇಗೆ ಅನಿಸ್ತಾ ಇದೆ ಎಂದು ನನಗೆ ಸಾಕಷ್ಟು ಸಲಹೆ ಸೂಚನೆ ಕೊಟ್ಟಿದ್ದಾರೆ. ಅವರ ಸಲಹೆಯೇ ನನಗೆ ಪ್ರೇರಣೆಯಾಯಿತು’ ಎಂದು ಸಂಜು ಹೇಳಿಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

T20 WC Final: ಸತತ ಎರಡನೇ ಬಾರಿ ಟೀಂ ಇಂಡಿಯಾ ವಿಶ್ವ ಚಾಂಪಿಯನ್