Publish Date: Mon, 09 Mar 2026 (09:02 IST)
Updated Date: Mon, 09 Mar 2026 (09:05 IST)
ಬಹುಮಹಡಿ ಕಟ್ಟಡದಿಂದ ಜಾರಿದ್ದ ಪುಟಾಣಿ ಮಗುವನ್ನು ವ್ಯಕ್ತಿಯೊಬ್ಬ ಜೀವದ ಹಂಗು ತೊರೆದು ರಕ್ಷಿಸಿದ ಮೈ ಜುಮ್ ಎನಿಸುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಝಕಿಸ್ತಾನದಲ್ಲಿ ಈ ಘಟನೆ ನಡೆದಿದೆ. ಕೆಲವೊಮ್ಮೆ ಮಕ್ಕಳು ಆಟವಾಡುವಾಗ ಅನಾಹುತ ಮಾಡಿಕೊಳ್ಳುತ್ತಾರೆ. ಅದರಲ್ಲೂ ಬಹುಮಹಡಿ ಕಟ್ಟಡದಲ್ಲಿ ಆಡುವಾಗ ಮಕ್ಕಳ ಬಗ್ಗೆ ಮೈ ಎಲ್ಲಾ ಕಣ್ಣಾಗಿ ಕಾವಲಿರಬೇಕು.
ಇದೇ ರೀತಿ ಮೂರು ವರ್ಷದ ಪುಟಾಣಿ ಮಗುವೊಂದು ಆಟವಾಡುವಾಗ ಕಾಲು ಜಾರಿದೆ. ಪರಿಣಾಮ ಬಹುಮಹಡಿ ಕಟ್ಟಡದಲ್ಲಿ ಗ್ರಿಲ್ ಹಿಡಿದು ನೇತಾಡುತ್ತಿತ್ತು. ಕೆಳಗೆ ಬಿದ್ದರೆ ಪ್ರಪಾತ. ಮಗುವಿನ ಪ್ರಾಣ ಉಳಿಯುವುದು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ.
ಇಂಥಾ ಪರಿಸ್ಥಿತಿಯಲ್ಲಿ ವ್ಯಕ್ತಿಯೊಬ್ಬ ತನ್ನ ಎಂಟನೇ ಫ್ಲೋರ್ ನಲ್ಲಿರುವ ಅಪಾರ್ಟ್ ಮೆಂಟ್ ನಿಂದ ಗ್ರಿಲ್ ಗಳನ್ನು ಹಿಡಿದು ಮೇಲೇರಿದ್ದಾನೆ. ಬಳಿಕ ಮಗುವಿನ ಕಾಲು ಹಿಡಿದು ಎಳೆದು ತನ್ನ ತೆಕ್ಕೆಗೆ ಎಳೆದುಕೊಂಡಿದ್ದು ಮಗುವನ್ನು ರಕ್ಷಿಸಿದ್ದಾನೆ. ಈ ವಿಡಿಯೋ ಇಲ್ಲಿದೆ ನೋಡಿ.