Publish Date: Fri, 06 Mar 2026 (13:34 IST)
Updated Date: Fri, 06 Mar 2026 (13:37 IST)
ಕಂಕುಳಲ್ಲಿ ಮಗುವನ್ನು ಎತ್ತಿಕೊಂಡೇ ತಾಯಿಯೊಬ್ಬಳು ಎರಡೆರಡು ಮೂಟೆಯನ್ನು ಹೆಗಲಿಗೇರಿಸಿಕೊಂಡು ಮೂಟೆ ಹೊರುವ ಕಾಯಕವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಮ್ಮ ದೇಶದಲ್ಲಿ ಎಷ್ಟೋ ತಾಯಂದಿರು ತಮ್ಮ ಒಂದು ಹೊತ್ತಿನ ಊಟಕ್ಕಾಗಿ ಕಷ್ಟಪಡುವವರು ಇದ್ದಾರೆ. ಮಕ್ಕಳನ್ನು ನೋಡಿಕೊಳ್ಳಲು ಜನರಿಲ್ಲದೇ ಬಡ ತಾಯಂದಿರುವ ಕೆಲಸ ಮಾಡುವ ಸ್ಥಳಕ್ಕೆ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ.
ಅಂತಹದ್ದೇ ಒಂದು ದೃಶ್ಯವಿದು. ಬಡ ತಾಯಿಯೊಬ್ಬಳಿಗೆ ತನ್ನ ಮನೆಯಲ್ಲಿ ಮಗುವನ್ನು ನೋಡಕೊಳ್ಳಲು ಯಾರೂ ಇರಲ್ಲ. ಆದರೆ ತುತ್ತಿನ ಚೀಲ ನಡೆಯಬೇಕು. ಇದಕ್ಕಾಗಿ ಆಕೆ ಮೂಟೆ ಹೊರುವ ಕೂಲಿ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾಳೆ.
ಆಕೆ ಮೂಟೆ ಹೊರುವಾಗ ಕಂಕುಳಲ್ಲಿ ಮಗುವೂ ಇರುತ್ತದೆ. ಒಂದೆಡೆ ಮಗುವನ್ನು ಎತ್ತಿಕೊಳ್ಳಬೇಕು ಇನ್ನೊಂದೆಡೆ ತಲೆ ಮೇಲೆ ಎರಡು ಮೂಟೆಗಳನ್ನು ಹೊತ್ತು ನಡೆಯುತ್ತಾಳೆ. ಆಕೆಯ ಈ ವಿಡಿಯೋಗೆ ಸಾಕಷ್ಟು ಮಂದಿ ಅನುಕಂಪ ವ್ಯಕ್ತಪಡಿಸಿದ್ದಾರೆ.