Publish Date: Sat, 07 Mar 2026 (10:12 IST)
Updated Date: Sat, 07 Mar 2026 (10:25 IST)
ಬೆಂಗಳೂರು: ಯೋಗ ಮಾಡುವ ಸ್ಥಳಕ್ಕೆ ಸಾಕು ನಾಯಿ ಕರೆತಂದು ನಿವಾಸಿಯೊಬ್ಬ ಮಲ ಮೂತ್ರ ಮಾಡಿಸಿದ್ದಕ್ಕೆ ಸಿಟ್ಟಿಗೆದ್ದ ಹಿರಿಯ ನಾಗರಿಕರು ಸಿನಿಮಾ ಸ್ಟೈಲ್ ನಲ್ಲಿ ಹೊಡೆದಾಡಿಕೊಂಡ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ ಮೆಂಟ್ ಒಂದರಲ್ಲಿ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ನಾಯಿ ವಿಚಾರಕ್ಕೆ ಹೊಡೆದಾಟ-ಬಡಿದಾಟವಾಗುವುದು ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.
ಇದೇ ರೀತಿ ವರ್ತೂರಿನ ಬ್ರಿಗೇಡ್ ಯುಟೋಪಿಯಾದಲ್ಲಿ ಯೋಗ ಮಾಡುವ ಸ್ಥಳಕ್ಕೆ ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಯನ್ನು ಕರೆತಂದು ಮಲ ಮೂತ್ರ ಮಾಡಿಸುತ್ತಿದ್ದ. ಇದೇ ಸಮಯಕ್ಕೆ ಅಲ್ಲಿ ಸಾಕಷ್ಟು ಮಂದಿ ಹಿರಿಯ ನಾಗರಿಕರು, ಮಹಿಳೆಯರು ಯೋಗ ಮಾಡುತ್ತಿದ್ದರು.
ಅಲ್ಲಿಯೇ ನಾಯಿ ಬಳಿ ಕಕ್ಕ ಮಾಡಿಸುತ್ತಿದ್ದರಿಂದ ಸಿಟ್ಟಿಗೆದ್ದ ಹಿರಿಯ ನಾಗರಿಕರು ಆತನನ್ನು ಪ್ರಶ್ನೆ ಮಾಡಿದ್ದಲ್ಲದೆ ಕಪಾಳಕ್ಕೆ ಭಾರಿಸಿದ್ದಾರೆ. ಈ ವೇಳೆ ನಾಯಿ ಮಾಲಿಕನೂ ಪ್ರತಿಯಾಗಿ ಹೊಡೆದಿದ್ದಾನೆ. ಈ ವೇಳೆ ಇಬ್ಬರ ನಡುವೆ ಹೊಡೆದಾಟವೇ ನಡೆದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಘಟನೆ ಬಳಿಕ ಎರಡೂ ಕಡೆಯವರು ಪೊಲೀಸರಿಗೆ ದೂರು-ಪ್ರತಿದೂರು ಸಲ್ಲಿಸಿದ್ದಾರೆ.