ನಾಯಿಗಳು ಸಿಟ್ಟು ಅಥವಾ ಅತೀ ಉತ್ಸಾಹ ಬಂದರೆ ಏನು ಬೇಕಾದರೂ ಮಾಡಬಲ್ಲವು ಎಂಬುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವೇ ಸಾಕ್ಷಿ.
ಇದು ಉತ್ತರ ಗೋವಾದಲ್ಲಿ ನಡೆದ ಘಟನೆ. ಯಾರೋ ಕಾರು ಪಾರ್ಕಿಂಗ್ ಮಾಡಿ ಹೋಗಿರುತ್ತಾರೆ. ಅದೆಲ್ಲಿಯೋ ಇದ್ದ ನಾಯಿ ಕಾರನ್ನು ತನ್ನ ಅಭ್ಯಾಸ ಬಲದಂತೆ ಮೊದಲು ಮೂಸಿ ನೋಡುತ್ತದೆ. ಬಳಿಕ ಹೆಡ್ ಲೈಟ್ ಬಳಿ ಅದಕ್ಕೆ ಏನೋ ಇದೆ ಎನಿಸುತ್ತದೆ.
ಹೀಗಾಗಿ ಕಾರಿನ ಬಂಪರ್ ನ್ನು ಕಚ್ಚಿ ಎಳೆಯುತ್ತದೆ. ಆಗ ಹೆಡ್ ಲೈಟ್ ನ ಭಾಗದಲ್ಲಿ ಕೊಂಚ ಬಂಪರ್ ಕಿತ್ತು ಬರುತ್ತದೆ. ಅಲ್ಲಿ ತಲೆ ತೂರಿಸಿಕೊಂಡು ಉತ್ಸಾಹದಿಂದ ಏನೋ ಹುಡುಕಾಡುವ ಡೋಗೇಶನಿಗೆ ಇನ್ನೂ ಸಾಕಾಗಲ್ಲ ಎನಿಸುತ್ತದೆ.
ಅದಕ್ಕೆ ಮತ್ತಷ್ಟು ಕಾರಿನ ಕೆಳ ಭಾಗವನ್ನು ತನ್ನೆಲ್ಲಾ ಶಕ್ತಿ ಪ್ರದರ್ಶಿಸಿ ಕಚ್ಚಿ ಎಳೆಯುತ್ತದೆ. ಪರಿಣಾಮ ಕಾರಿನ ಡೋರ್ ವರೆಗೆ ಬಾಡಿ ಕಿತ್ತುಕೊಂಡು ಬರುತ್ತದೆ. ನಾಯಿಗಳಿಗೂ ಎಂಥಾ ಶಕ್ತಿ ಎಂದು ನಿಮಗೆ ಈ ವಿಡಿಯೋ ನೋಡಿದರೆ ಅನಿಸದೇ ಇರದು.