ಅಂಗಡಿಗೆ ಬಂದು ತಂದೆಗೆ ಕಳ್ಳ ಹಿಗ್ಗಾಮುಗ್ಗಾ ಹೊಡೆದು ಹಣ ಪೀಕುತ್ತಿದ್ದರೆ ಇತ್ತ ಮಗಳು ಮಾಡಿದ ಮುಗ್ಧ ಕೆಲಸವೊಂದು ಆತನ ಮನಸ್ಸನ್ನೇ ಪರಿವರ್ತನೆಗೊಳಿಸಿದೆ. ಇಂತಹದ್ದೊಂದು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ತಂದೆ-ಮಗಳ ಬಾಂಧವ್ಯದ ಬಗ್ಗೆ ಎಷ್ಟೋ ಕತೆಗಳನ್ನು, ನಿದರ್ಶನಗಳನ್ನು ನಾವು ನೋಡಿದ್ದೇವೆ, ಓದಿರುತ್ತೇವೆ. ಆದರೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿದರೆ ಹೆಣ್ಣು ಮಗುವಿನ ಬಗ್ಗೆ ನಿಮಗಿರುವ ಮಮಕಾರ ಇನ್ನಷ್ಟು ಹೆಚ್ಚು ಮಾಡುತ್ತದೆ.
ಓರ್ವ ವ್ಯಕ್ತಿ ತನ್ನ ಮಗಳೊಂದಿಗೆ ತನ್ನ ಅಂಗಡಿಯಲ್ಲಿ ಕೂತಿರುತ್ತಾನೆ. ಈ ವೇಳೆ ಕಳ್ಳನೊಬ್ಬ ಮುಖಕ್ಕೆ ಮಾಸ್ಕ್ ಹಾಕಿಕೊಂಡು ನುಗ್ಗುತ್ತಾನೆ. ಡ್ರಾಯರ್ ನಲ್ಲಿಟ್ಟಿರುವ ದುಡ್ಡು ಎಲ್ಲಾ ಕೊಡುವಂತೆ ಹೊಡೆದು ಬೆದರಿಕೆ ಹಾಕುತ್ತಾನೆ. ಆತನ ಭಯಕ್ಕೆ ಅಂಗಡಿ ಮಾಲಿಕ ಡ್ರಾಯರ್ ನಲ್ಲಿದ್ದ ದುಡ್ಡನ್ನೆಲ್ಲಾ ಕೊಡುತ್ತಾನೆ.
ಆಗ ಪಕ್ಕದಲ್ಲೇ ಕುರ್ಚಿಯಲ್ಲಿ ಕೂತು ಲಾಲಿಪಾಪ್ ತಿನ್ನುತ್ತಿದ್ದ ಮಗಳು ಅದನ್ನೂ ಕಳ್ಳನಿಗೆ ನೀಡಲು ಮುಂದಾಗುತ್ತಾಳೆ. ಇದನ್ನು ನೋಡಿ ಕಳ್ಳನ ಮನಸ್ಸು ಕರಗುತ್ತದೆ. ತಾನು ವಶಪಡಿಸಿಕೊಂಡಿದ್ದ ದುಡ್ಡನ್ನೆಲ್ಲಾ ವಾಪಸ್ ಟೇಬಲ್ ಮೇಲಿಟ್ಟು ಮಗುವಿಗೆ ಮುತ್ತಿಕ್ಕಿ ಅಲ್ಲಿಂದ ತೆರಳುತ್ತಾನೆ. ಈ ವೈರಲ್ ವಿಡಿಯೋ ಇಲ್ಲಿದೆ ನೋಡಿ.