ಗುಂಟೂರು: ಲಾರಿಯಡಿ ಸಿಲುಕಿ ದ್ವಿಚಕ್ರ ವಾಹನ ಸವಾರ ಭೀಕರವಾಗಿ ನರಳಿ ಪ್ರಾಣ ಬಿಟ್ಟಿದ್ದಾನೆ. ಆದರೆ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಯಾರೂ ಕೇಳೋರೇ ಇಲ್ಲ ಎಂಬ ಪರಿಸ್ಥಿತಿ. ಈ ಭೀಕರ ವಿಡಿಯೋ ಈಗ ವೈರಲ್ ಆಗಿದೆ.
ಭಾರತದಲ್ಲಿ ಇತ್ತೀಚೆಗೆ ರಸ್ತೆ ಅಪಘಾತಗಳು ಸಾಮಾನ್ಯವಾಗುತ್ತಿದೆ. ಅತೀ ಹೆಚ್ಚು ಸಾವುಗಳಾಗುತ್ತಿರುವುದು ರಸ್ತೆ ಅಪಘಾತಗಳಿಂದಲೇ. ವಿಪರ್ಯಾಸವೆಂದರೆ ಬಹುತೇಕ ಸಂದರ್ಭಗಳಲ್ಲಿ ಹೆಲ್ಮೆಟ್ ಇಲ್ಲದೇ ಚಾಲನೆ, ಅಜಾಗರೂಕತೆಗಳಿಂದಲೇ ಅಪಘಾತಗಳಾಗುತ್ತವೆ.
ಇದೀಗ ಗುಂಟೂರಿನಲ್ಲಿ ನಡೆದ ಅಪಘಾತವೊಂದರ ವಿಡಿಯೋವೊಂದು ವೈರಲ್ ಆಗಿದೆ. ದ್ವಿಚಕ್ರವಾಹನ ಸವಾರನಿಗೆ ಹಿಂದಿನಿಂದ ಬಂದ ಬೃಹತ್ ಟ್ರಕ್ ಢಿಕ್ಕಿ ಹೊಡೆದಿದೆ. ಆಯತಪ್ಪಿ ಬೀಳುವ ಬೈಕ್ ಸವಾರ ಟ್ರಕ್ ನ ಚಕ್ರದ ಅಡಿಗೆ ಸಿಲುಕುತ್ತಾನೆ.
ಇದರಿಂದ ಕ್ಷಣ ಮಾತ್ರದಲ್ಲಿ ನರಳಾಡಿ ಆತ ಪ್ರಾಣ ಬಿಡುತ್ತಾನೆ. ವಿಚಿತ್ರವೆಂದರೆ ಅಲ್ಲೇ ಸಾಕಷ್ಟು ಜನ ಸುಳಿದಾಡುತ್ತಿದ್ದರೂ ಯಾರೂ ಆತನತ್ತ ತಿರುಗಿಯೂ ನೋಡುವುದಿಲ್ಲ. ಈ ವಿಡಿಯೋ ಈಗ ವೈರಲ್ ಆಗಿದೆ.