ಉಡುಪಿ: ಮುಖ್ಯ ಶಿಕ್ಷಕರು, ಪೋಷಕರು ಬುದ್ಧಿ ಹೇಳಿದರೂ ಕೇಳದೇ ವಿದ್ಯಾರ್ಥಿಗಳ ಜನಿವಾರ, ಪವಿತ್ರ ದಾರಗಳನ್ನು ತೆಗೆಸುತ್ತಿದ್ದ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.
ಕಾರ್ಕರಳದ ಮಿಯ್ಯಾರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ. ಶಿಕ್ಷಕ ಮದರಸಾ ಎಸ್ ಮಕಂದರ್ ಎಂಬಾತನನ್ನು ವಜಾಗೊಳಿಸಲಾಗಿದೆ. ಕಲಬುರಗಿ ಮೂಲದವನಾದ ಆತ ಈ ವರ್ಷ ಜೂನ್ ನಲ್ಲಿ ಅತಿಥಿ ಶಿಕ್ಷಕನಾಗಿ ಸೇರ್ಪಡೆಯಾಗಿದ್ದ.
ವಿದ್ಯಾರ್ಥಿಗಳು ಜನಿವಾರ ಧರಿಸಿದ್ದರೆ ಅಥವಾ ಪವಿತ್ರ ದಾರಗಳನ್ನು ಕೈಗೆ ಕಟ್ಟಿಕೊಂಡಿದ್ದರೆ ಈತ ತೆಗೆಯಲು ಹೇಳುತ್ತಿದ್ದ. ಕೇಳದೇ ಇದ್ದರೆ ವಿದ್ಯಾರ್ಥಿಗಳಿಗೆ ಕಠಿಣ ಶಿಕ್ಷೆಗಳನ್ನು ಕೊಡುತ್ತಿದ್ದ. ಈ ಬಗ್ಗೆ ಪೋಷಕರು ಮುಖ್ಯ ಶಿಕ್ಷಕರಿಗೆ ದೂರು ನೀಡಿದ್ದರು. ಹೀಗಾಗಿ ಮುಖ್ಯ ಶಿಕ್ಷಕರೂ ಹಲವು ಬಾರಿ ಈತನಿಗೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿದ್ದರು. ಆದರೂ ಆತ ತನ್ನ ಖಯಾಲಿ ಮುಂದುವರಿಸಿದ್ದ.
ಇದೀಗ ಹೇಳಿದರೂ ಕೇಳದ ಶಿಕ್ಷಕನನ್ನು ಅಮಾನತಗೊಳಿಸಲಾಗಿದೆ. ಜನಿವಾರ ಆಗಲೀ, ಕೈಗೆ ಕಟ್ಟು ದಾರಗಳಾಗಲೀ ಆಯಾ ಧರ್ಮದವರಿಗೆ ವಿಶೇಷವಾದ ಧಾರ್ಮಿಕ ನಂಬಿಕೆಗೆ ಸಂಬಂಧಿಸಿದ್ದಾಗಿದೆ. ಇದನ್ನು ಪ್ರಶ್ನಿಸುವುದು ಅಥವಾ ಕಿತ್ತು ಹಾಕುವಂತೆ ಹೇಳುವಂತೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಂತೆ. ಜನಿವಾರ ಎಂದರೆ ಏನು ಎಂದು ಈ ಶಿಕ್ಷಕನಿಗೆ ಕೇಳಿದರೆ ಅದು ಗೊತ್ತಿಲ್ಲ ಅಂತಾನೆ. ಇನ್ನೊಬ್ಬರ ಧಾರ್ಮಿಕ ಭಾವನೆ ಬಗ್ಗೆ ಸ್ವಲ್ಪವೂ ಗೌರವವಿಲ್ಲದ ಇಂತಹ ಶಿಕ್ಷಕರು ಸೇವೆಯಲ್ಲಿರಬಾರದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.