Daily Horoscope

Select Your Language

Notifications

webdunia
webdunia
webdunia
webdunia

ಯುದ್ಧದ ಪರಿಣಾಮ ನಿಮ್ಮ ಅಡುಗೆ ಮನೆಗೂ ಬಂತು: ಸಿಲಿಂಡರ್ ಬೆಲೆ ಏರಿಕೆ

LPG Cylinder
ನವದೆಹಲಿ: ಯುದ್ಧದ ಪರಿಣಾಮ ನಿಮ್ಮ ಅಡುಗೆ ಮನೆಗೂ ಬಂತು. ಇಸ್ರೇಲ್, ಇರಾನ್ ಮತ್ತು ಗಲ್ಫ್ ರಾಷ್ಟ್ರಗಳ ನಡುವಿನ ಯುದ್ಧದ ಪರಿಣಾಮ ಈಗ ಭಾರತಕ್ಕೂ ತಗುಲಿದೆ. ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿದೆ.

ಇಸ್ರೇಲ್-ಅಮೆರಿಕಾ ಬೆಂಬಲಿಸುತ್ತಿರುವ ಗಲ್ಫ್ ರಾಷ್ಟ್ರಗಳ ಮೇಲೂ ಇರಾನ್ ದಾಳಿ ನಡೆಸುತ್ತಿದೆ. ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಈ ಉದ್ವಿಗ್ನ ಪರಿಸ್ಥಿತಿಯಿಂದ 14.2 ಕಿ.ಗ್ರಾಂ ತೂಕದ ಗೃಹ ಬಳಕೆಯ ಸಿಲಿಂಡರ್ ಬೆಲೆ 60 ರೂ.ಗಳಷ್ಟು ಏರಿಕೆಯಾಗಿದೆ.

ದೆಹಲಿಯಲ್ಲಿ ಸಿಲಿಂಡರ್ ಬೆಲೆ 853 ರೂ.ಗಳಿಂದ 913 ರೂ.ಗೆ ಏರಿಕೆಯಾಗಿದೆ. ವಾಣಿಜ್ಯ ಸಿಲಿಂಡರ್ ಬೆಲೆಯೂ 115 ರೂ. ಏರಿಕೆಯಾಗಿದೆ. ಇದರಿಂದ ವಾಣಿಜ್ಯ ಸಿಲಿಂಡರ್ ಬೆಲೆ 1883 ರೂ. ಗೆ ತಲುಪಿದೆ. ಈಗಾಗಲೇ ಅನಿಲ ಕೊರತೆ ಎದುರಾಗದಂತೆ ಉತ್ಪಾದನೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಎಲ್ ಪಿಜಿ ಸಂಸ್ಕರಣಾಗಾರಗಳಿಗೆ ಸೂಚನೆ ನೀಡಿದೆ.

ಯುದ್ಧದ ವಾತಾವರಣದಿಂದ ದೇಶದಲ್ಲಿ ಅನಿಲ ಮತ್ತು ತೈಲ ಕೊರತೆ ಎದುರಾಗಬಹುದು ಎಂಬ ಆತಂಕದ ಬೆನ್ನಲ್ಲೇ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ದೇಶದಲ್ಲಿ ಇಂಧನ ದಾಸ್ತಾನು ಸಾಕಷ್ಟಿದ್ದು ಆತಂಕ ಪಡಬೇಕಾಗಿಲ್ಲ ಎಂದು ಭರವಸೆ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೀಪ ಬೆಳಗುವಾಗ ರಾಹುಲ್ ಗಾಂಧಿಗೆ ಚಪ್ಪಲಿ ತೆಗೆಯಲು ಸೂಚಿಸಿದ ಕೆಸಿ ವೇಣುಗೋಪಾಲ್ Video