Publish Date: Mon, 09 Mar 2026 (13:40 IST)
Updated Date: Mon, 09 Mar 2026 (13:43 IST)
ಅಹ್ಮದಾಬಾದ್: ಟಿ20 ವಿಶ್ವಕಪ್ ಫೈನಲ್ ನಲ್ಲಿ ಗೆಲುವು ಕಾಣುತ್ತಿದ್ದಂತೇ ರೋಹಿತ್ ಶರ್ಮಾರನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಾಪಿ ಮಾಡಿದ್ದಾರೆ.
ಕಳೆದ ಬಾರಿ 2024 ರಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಚಾಂಪಿಯನ್ ಆಗಿತ್ತು. ಅಮೆರಿಕಾ ಆತಿಥ್ಯದಲ್ಲಿ ನಡೆದಿದ್ದ ಕೂಟದಲ್ಲಿ ಟೀಂ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಿದ್ದರು. ಬಹಳ ವರ್ಷಗಳ ನಂತರ ಭಾರತ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡ ಕ್ಷಣವಾಗಿತ್ತು.
ಇದೇ ಖುಷಿಯಲ್ಲಿ ಅಂದು ನಾಯಕರಾಗಿದ್ದ ರೋಹಿತ್ ಶರ್ಮಾ ಪಿಚ್ ಬಳಿ ಹೋಗಿ ಅಲ್ಲಿನ ಮಣ್ಣಿನ ಚೂರು ತೆಗೆದು ಬಾಯಿಗೆ ಹಾಕಿಕೊಂಡಿದ್ದರು. ಈ ಬಗ್ಗೆ ಸ್ವತಃ ಪ್ರಧಾನಿ ಮೋದಿ ಕೂಡಾ ರೋಹಿತ್ ಶರ್ಮಾರನ್ನು ಪ್ರಶ್ನಿಸಿದ್ದರು. ಗೆಲುವಿನ ಟೇಸ್ಟ್ ಹೇಗಿತ್ತು ಎಂದು ತಮಾಷೆ ಮಾಡಿದ್ದರು.
ಇದೀಗ ಸೂರ್ಯಕುಮಾರ್ ಯಾದವ್ ಕೂಡಾ ನಿನ್ನೆ ಟ್ರೋಫಿ ಗೆದ್ದ ಬಳಿಕ ಪಿಚ್ ಬಳಿ ತೆರಳಿ ಅಲ್ಲಿನ ಮಣ್ಣನ್ನು ಕೈಗೆ ಸವರಿ ಬಾಯಿಗೆ ಮುತ್ತಿಕ್ಕಿದ್ದಲ್ಲದೆ ಹಣೆಗೆ ಮೆತ್ತಿಕೊಂಡು ಸಂಭ್ರಮಿಸಿದ್ದಾರೆ. ವಿಶ್ವಕಪ್ ಗೆಲುವು ತಂದುಕೊಟ್ಟ ಪಿಚ್ ಗೆ ತಮ್ಮದೇ ರೀತಿಯಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.