Publish Date: Fri, 06 Mar 2026 (15:13 IST)
Updated Date: Fri, 06 Mar 2026 (15:15 IST)
ಮುಂಬೈ: ಟೀಂ ಇಂಡಿಯಾ ಟಿ20 ವಿಶ್ವಕಪ್ ಫೈನಲ್ ಗೆ ಬಂದಿದ್ದು ಇದರ ಜೊತೆಗೆ ಪತ್ನಿ ಕಡೆಯಿಂದಲೂ ಸೂರ್ಯಕುಮಾರ್ ಯಾದವ್ ಖುಷಿ ಸುದ್ದಿ ನೀಡುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಅದಕ್ಕೆ ಕಾರಣವಾಗಿರುವುದು ಈ ವಿಡಿಯೋ.
ನಿನ್ನೆ ವಾಂಖೆಡೆ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಸೆಮಿಫೈನಲ್ ಪಂದ್ಯ ನಡೆದಿತ್ತು. ಈ ಪಂದ್ಯ ವೀಕ್ಷಿಸಲು ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ ಬಂದಿದ್ದರು. ಅವರು ಪಂದ್ಯ ಮುಗಿಸಿ ತೆರಳುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ದೇವಿಶಾ ಉಬ್ಬು ಹೊಟ್ಟೆ ಎಲ್ಲರ ಗಮನ ಸೆಳೆದಿದ್ದು ಸೂರ್ಯ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಸೂರ್ಯ ಜೊತೆಗೆ ದೇವಿಶಾ ಎಲ್ಲೂ ಕಾಣಿಸಿಕೊಳ್ಳದೇ ಇರುವುದು ಈ ಅನುಮಾನ ಹೆಚ್ಚಿಸಿದೆ.
ದೇವಿಶಾ ಉಬ್ಬು ಹೊಟ್ಟೆ ನೋಡಿ ಆಗಲೇ ಫ್ಯಾನ್ಸ್ ಸೂರ್ಯ ಭಾಯ್ ಗೆ ಡಬಲ್ ಖುಷಿ ಎಂದು ಶುಭ ಹಾರೈಸಲು ಶುರು ಮಾಡಿದ್ದಾರೆ. 2016 ರಲ್ಲಿ ಮಂಗಳೂರು ಮೂಲದ ದೇವಿಶಾರನ್ನು ಸೂರ್ಯ ಪ್ರೀತಿಸಿ ಮದುವೆಯಾಗಿದ್ದರು.