Publish Date: Wed, 18 Jun 2025 (11:39 IST)
Updated Date: Wed, 18 Jun 2025 (11:42 IST)
ಮುಂಬೈ: ಟೀಂ ಇಂಡಿಯಾ ಟಿ20 ಕ್ರಿಕೆಟ್ ತಂಡದ ನಾಯಕರಾಗಿರುವ ಸೂರ್ಯಕುಮಾರ್ ಯಾದವ್ ಗೆ ಆರೋಗ್ಯ ಸಮಸ್ಯೆಯೊಂದು ಕಾಡುತ್ತಿದ್ದು ಮುಂದಿನ ಕೆಲವು ದಿನಗಳು ಅವರು ಕ್ರಿಕೆಟ್ ನಿಂದ ದೂರವುಳಿಯಲಿದ್ದಾರೆ.
ಇತ್ತೀಚೆಗಷ್ಟೇ ಐಪಿಎಲ್ ಆಡಿದ್ದ ಸೂರ್ಯಕುಮಾರ್ ಯಾದವ್ ಗೆ ಈಗ ಬಲಬದಿಯ ಸ್ಪೋರ್ಟ್ಸ್ ಹರ್ನಿಯಾ ಸಮಸ್ಯೆ ಕಾಡುತ್ತಿದೆ. ಇದರ ಚಿಕಿತ್ಸೆಗಾಗಿ ಅವರೂ ಈಗ ಲಂಡನ್ ನಲ್ಲಿದ್ದಾರೆ. ಹೀಗಾಗಿ ಕೆಲವು ದಿನಗಳ ಕಾಲ ಅವರು ಕ್ರಿಕೆಟ್ ನಿಂದ ದೂರವುಳಿಯಲಿದ್ದಾರೆ.
ವಿಶ್ರಾಂತಿ ಬಳಿಕ ಫಿಟ್ನೆಸ್ ಮರಳಿ ಪಡೆಯಲು ಕೆಲವು ಸಮಯ ಬೇಕಾಗಲಿದೆ. ಹೀಗಾಗಿ ಸದ್ಯಕ್ಕೆ ಸೂರ್ಯಕುಮಾರ್ ಗೆ ಸಕ್ರಿಯ ಕ್ರಿಕೆಟ್ ಗೆ ಮರಳಲಾಗದು ಎನ್ನಲಾಗುತ್ತಿದೆ. ಅವರ ಚೇತರಿಕೆಗೆ ಸುಮಾರು ಎರಡು ತಿಂಗಳು ಬೇಕಾಗಬಹುದು ಎನ್ನಲಾಗಿದೆ. ಈ ಬಗ್ಗೆ ಬಿಸಿಸಿಐ ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.