Publish Date: Tue, 17 Jun 2025 (20:40 IST)
Updated Date: Tue, 17 Jun 2025 (20:42 IST)
ಲಂಡನ್: ಟೀಂ ಇಂಡಿಯಾ ನಾಯಕರಾಗಿ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದಾಗ ಜಸ್ಪ್ರೀತ್ ಬುಮ್ರಾ ನಾಯಕರಾಗಬಹುದೇ ಎಂಬ ಕುತೂಹಲ ಎಲ್ಲರಲ್ಲಿತ್ತು. ಆದರೆ ಬುಮ್ರಾ ಕ್ಯಾಪ್ಟನ್ ಆಗದೇ ಇರುವುದಕ್ಕೆ ನಿಜ ಕಾರಣವೇನೆಂದು ಅವರೇ ಬಹಿರಂಗಪಡಿಸಿದ್ದಾರೆ.
ಟೀಂ ಇಂಡಿಯಾ ಈಗ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಟೀಂ ಇಂಡಿಯಾ ಟೆಸ್ಟ್ ತಂಡದ ಕ್ಯಾಪ್ಟನ್ ಆಗಿ ಶುಬ್ಮನ್ ಗಿಲ್ ಕಣಕ್ಕಿಳಿಯುತ್ತಿದ್ದಾರೆ. ಬುಮ್ರಾ ತಂಡದಲ್ಲಿದ್ದರೂ ಈ ಸರಣಿಗೆ ಸಂಪೂರ್ಣವಾಗಿ ಲಭ್ಯವಿಲ್ಲ. ಹಾಗಿದ್ದರೆ ಅವರು ಕ್ಯಾಪ್ಟನ್ಸಿ ನಿರಾಕರಿಸಿದ್ದೇಕೆ ಎಂದು ಅವರೇ ಹೇಳಿದ್ದಾರೆ.
ನನಗೆ ವರ್ಕ್ ಲೋಡ್ ಜಾಸ್ತಿಯಾಗುತ್ತಿತ್ತು. ಸುದೀರ್ಘ ಸಮಯದವರೆಗೆ ಆಡಲು ನನಗೆ ಫಿಟ್ನೆಸ್ ಸಮಸ್ಯೆಯಾಗುತ್ತದೆ. ಹೀಗಾಗಿ ಐದು ಪಂದ್ಯಗಳ ಸರಣಿಯಲ್ಲಿ ಮೂರು ಪಂದ್ಯ ಆಡಿ ಉಳಿದ ಎರಡು ಪಂದ್ಯಗಳಿಗೆ ಮತ್ತೊಬ್ಬ ನಾಯಕನನ್ನು ಕಂಡುಕೊಳ್ಳಬೇಕಾಗುತ್ತದೆ. ಇದೆಲ್ಲವೂ ಗೊಂದಲ ಸೃಷ್ಟಿಸುತ್ತದೆ. ಈ ಕಾರಣಕ್ಕೆ ಬಿಸಿಸಿಐ ಜೊತೆ ಚರ್ಚಿಸಿ ನಾನು ನಾಯಕತ್ವ ಬೇಡ ಎಂದ ತೀರ್ಮಾನಕ್ಕೆ ಬಂದೆ ಎಂದು ಬುಮ್ರಾ ಹೇಳಿಕೊಂಡಿದ್ದಾರೆ.