Select Your Language

Notifications

webdunia
webdunia
webdunia
webdunia

IND vs ENG test: ಟೀಂ ಇಂಡಿಯಾ, ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ ಇಲ್ಲಿದೆ ನೋಡಿ

IND vs ENG

Krishnaveni K

ಲಂಡನ್ , ಮಂಗಳವಾರ, 10 ಜೂನ್ 2025 (09:00 IST)
Photo Credit: X
ಲಂಡನ್: ಐಪಿಎಲ್ ಜಾತ್ರೆ ಮುಗಿದು ಇದೀಗ ಟೀಂ ಇಂಡಿಯಾ ಆಟಗಾರರು ರಾಷ್ಟ್ರೀಯ ತಂಡದ ಕಡೆಗೆ ಗಮನ ಹರಿಸಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಇಲ್ಲಿ ಐದು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ಸರಣಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ ಟೀಂ ಇಂಡಿಯಾ ಇದೀಗ ಮತ್ತೆ ಟೆಸ್ಟ್ ಸರಣಿ ಆಡಲು ಸಜ್ಜಾಗಿದೆ. ಈ ಬಾರಿ ಇಂಗ್ಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ. ತವರಿನಲ್ಲಿ ಇಂಗ್ಲೆಂಡ್ ಎದುರಿಸುವುದು ಅಷ್ಟು ಸುಲಭವಲ್ಲ. ಇದುವರೆಗೆ ಇಲ್ಲಿ ಭಾರತಕ್ಕೆ ಸಕ್ಸಸ್ ಸಿಕ್ಕಿದ್ದೂ ಕಡಿಮೆ.

ಆದರೆ ಈ ಬಾರಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಂತಹ ಅನುಭವಿಗಳಿಲ್ಲದೇ ಶುಬ್ಮನ್ ಗಿಲ್ ನಾಯಕತ್ವದಲ್ಲಿ ಯಂಗ್ ಇಂಡಿಯಾ ತಂಡ ಟೆಸ್ಟ್ ಕಣಕ್ಕಿಳಿಯುತ್ತಿದೆ. ಹಿರಿಯ ಆಟಗಾರರ ನಿವೃತ್ತಿ ಬಳಿಕ ಯುವ ಆಟಗಾರರು ಆ ಕೊರತೆಯನ್ನು ಹೇಗೆ ನಿಭಾಯಿಸುತ್ತಾರೆ ಎಂದು ನೋಡುವುದಕ್ಕೆ ಈ ಟೆಸ್ಟ್ ಸರಣಿ ಪರೀಕ್ಷಾ ಕಣವಾಗಲಿದೆ.

ಜೂನ್ 20 ರಿಂದ ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ. ಎಲ್ಲಾ ಪಂದ್ಯಗಳೂ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 3.30 ಕ್ಕೆ ಆರಂಭವಾಗಲಿದೆ. ಉಳಿದಂತೆ ಸರಣಿಯ ವೇಳಾಪಟ್ಟಿ ಇಲ್ಲಿದೆ ನೋಡಿ.

ಜೂನ್ 20-24:   ಮೊದಲ ಟೆಸ್ಟ್ (ಹೆಡಿಂಗ್ಲೆ)
ಜುಲೈ 2-6:              ದ್ವಿತೀಯ ಟೆಸ್ಟ್ (ಎಡ್ಜ್ ಬಾಸ್ಟನ್)
ಜುಲೈ 10-14:   ತೃತೀಯ ಟೆಸ್ಟ್ (ಲಾರ್ಡ್ಸ್)
ಜುಲೈ 23-27:   ನಾಲ್ಕನೇ ಟೆಸ್ಟ್ (ಓಲ್ಡ್ ಟ್ರಾಫೋರ್ಡ್)
ಜುಲೈ 31-ಆಗಸ್ಟ್ 4:   ಐದನೇ ಟೆಸ್ಟ್ (ದಿ ಓವಲ್)

Share this Story:

Follow Webdunia kannada

ಮುಂದಿನ ಸುದ್ದಿ

Bengaluru Stampede: ತಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರ್ಟ್‌ ಮೆಟ್ಟಿಲೇರಿದ RCB