Publish Date: Mon, 12 Jan 2026 (18:19 IST)
Updated Date: Mon, 12 Jan 2026 (18:22 IST)
ಹಲವರಲ್ಲಿ ದೇಹದ ಕುತ್ತಿಗೆಯ ಭಾಗದಲ್ಲಿ ಸುತ್ತ ಕಪ್ಪು ಬಣ್ಣ ಕಾಣಿಸಿಕೊಳ್ಳುವುದನ್ನು ಕಾಣಬಹುದು. ಇದು ಸೌಂದರ್ಯದ ವಿಚಾರಕ್ಕೆ ಅಲ್ಲದೆ, ಕೆಲವೊಮ್ಮೆ ದೇಹದ ಒಳಗಿನ ಆರೋಗ್ಯದ ಸಂಕೇತವೂ ಆಗಿರಬಹುದು.
ಇದಕ್ಕೆ ಮುಖ್ಯ ಕಾರಣಗಳು ಮತ್ತು ಸರಳ ಪರಿಹಾರಗಳು ಹೀಗಿದೆ:
ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾದಾಗ ಅಥವಾ ಮಧುಮೇಹದ ಪೂರ್ವ ಲಕ್ಷಣವಾಗಿ ಕುತ್ತಿಗೆ ಕಪ್ಪಾಗಬಹುದು.
ಅತಿಯಾದ ತೂಕ: ಇನ್ನೂ ದೇಹದ ತೂಕ ಹೆಚ್ಚಾದಾ, ಚರ್ಮದ ಮಡಿಕೆಗಳಲ್ಲಿ ಘರ್ಷಣೆ ಉಂಟಾಗಿ ಬಣ್ಣ ಬದಲಾಗುತ್ತದೆ.
ಹಾರ್ಮೋನ್‌ನಲ್ಲಿ ಏರುಪೇರು: ಪಿಸಿಒಡಿ ಅಥವಾ ಥೈರಾಯ್ಡ್ ಸಮಸ್ಯೆ ಇರುವವರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.
ಶುಚಿತ್ವದ ಕೊರತೆ: ಸರಿಯಾಗಿ ಸ್ನಾನ ಮಾಡದಿದ್ದಾಗ ಮೃತ ಕೋಶಗಳು ಮತ್ತು ಕೊಳೆ ಶೇಖರಣೆಯಾಗುವುದು.