Publish Date: Mon, 12 Jan 2026 (14:13 IST)
Updated Date: Mon, 12 Jan 2026 (14:19 IST)
ಬೆಂಗಳೂರು: ಆಲೂಗಡ್ಡೆ ತಿಂದರೆ ಹೊಟ್ಟೆ ದಪ್ಪ ಆಗುತ್ತದೆ ಎಂದು ಕೆಲವರು ನಂಬುತ್ತಾರೆ. ಆದರೆ ಆಲೂಗಡ್ಡೆ ತಿಂದರೆ ನಿಜಕ್ಕೂ ಹೊಟ್ಟೆ ದಪ್ಪ ಆಗುತ್ತಾ? ಇಲ್ಲಿದೆ ನಿಜಾಂಶ.
ಆಲೂಗಡ್ಡೆ ಕೆಲವರಿಗೆ ಗ್ಯಾಸ್ಟ್ರಿಕ್ ಉಂಟು ಮಾಡುತ್ತದೆ. ಆಯುರ್ವೇದದ ಪ್ರಕಾರ ಇದು ವಾಯು ಅಂಶವಿರುವ ತರಕಾರಿ. ಇದನ್ನು ಸೇವನೆ ಮಾಡುವುದರಿಂದ ಗ್ಯಾಸ್ಟ್ರಿಕ್ ಆಗುವುದು ಸಹಜ. ಹೀಗಾಗಿ ಇದನ್ನು ಸೇವನೆ ಮಾಡುವುದರಿಂದ ಹೊಟ್ಟೆಯೂ ದಪ್ಪ ಆಗುತ್ತದೆ ಎನ್ನುವ ತಪ್ಪು ಕಲ್ಪನೆ ಅನೇಕರಿಗಿದೆ.
ಆದರೆ ಆಲೂಗಡ್ಡೆ ಸೇವಿಸುವುದರಿಂದ ಹೊಟ್ಟೆ ದಪ್ಪ ಆಗಲ್ಲ. ಇದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಬೊಜ್ಜು ಕರಗಿಸಲು ಉತ್ತಮ ಆಹಾರವಾಗಿದೆ. ಯಾಕೆಂದರೆ ಆಲೂಗಡ್ಡೆ ತಿಂದರೆ ಬೇಗ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಹಾಗಾಗಿ ನೀವು ಸೇವಿಸುವ ಆಹಾರದ ಪ್ರಮಾಣವೂ ಕಡಿಮೆಯಾಗುತ್ತದೆ. ಆದರೆ ಆಲೂಗಡ್ಡೆಯನ್ನು ಫ್ರೈ ಮಾಡಿ, ಚಿಪ್ಸ್ ರೂಪದಲ್ಲಿ ಸೇವಿಸುವುದರಿಂದ ಬೊಜ್ಜು ಬರಬಹುದು.
ಆಲೂಗಡ್ಡೆಯನ್ನು ಬಾಯಿಲ್ ಮಾಡಿ ಸೇವಿಸಬಹದು. ಹಬೆಯಲ್ಲಿ ಬೇಯಿಸಿದ ಬಳಿಕ ತಣ್ಣಗಾದ ಮೇಲೆ ಸೇವಿಸಿದರೆ ಉತ್ತಮ. ಆಲೂಗಡ್ಡೆಯನ್ನು ಸಿಪ್ಪೆ ತೆಗೆಯದೇ ಸೇವಿಸಿ. ಆಗ ಅದರಲ್ಲಿರುವ ಫೈಬರ್ ನಷ್ಟವಾಗಲ್ಲ. ಇದು ತೂಕ ಇಳಿಕೆಗೂ ಉತ್ತಮ.