ಚಳಿಗಾಲದಲ್ಲಿ ಮಕ್ಕಳಿಗೆ ಸ್ಥಾನ ಮಾಡಿಸುವಾಗ ತುಂಬಾನೇ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಆದ್ದರಿಂದ, ಚಳಿಗಾಲದಲ್ಲಿ ಮಕ್ಕಳಿಗೆ ಸ್ನಾನ ಮಾಡಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಬಹಳ ಮುಖ್ಯ.
ಮಕ್ಕಳ ಸುರಕ್ಷಿತ ಸ್ನಾನಕ್ಕಾಗಿ ಇಲ್ಲಿದೆ ಕೆಲವೊಂದು ಟಿಪ್ಸ್‌ಗಳು
*ನೀರಿನ ತಾಪಮಾನ ಹೇಗಿರಬೇಕು?
ಈ ಸಂದರ್ಭದಲ್ಲಿ ಉಗುರುಬೆಚ್ಚಗಿನ ನೀರನ್ನು ಬಳಸಿ ಸ್ಥಾನ ಮಾಡಿಸಿ. ಚಳಿಯೆಂದು ಅತಿಯಾದ ಬಿಸಿ ನೀರಿನಲ್ಲೂ ಸ್ಥಾನ ಮಾಡಿಸಬಾರದು. ಏಕೆಂದರೆ ಅತಿಯಾದ ಬಿಸಿ ನೀರು ಮಗುವಿನ ಚರ್ಮದ ನೈಸರ್ಗಿಕ ತೈಲವನ್ನು ತೆಗೆದುಹಾಕಿ ಚರ್ಮವನ್ನು ಇನ್ನಷ್ಟು ಒಣಗಿಸುತ್ತದೆ.
2. ಸ್ನಾನದ ಸಮಯ ಮತ್ತು ಅವಧಿ
ಮಧ್ಯಾಹ್ನ ಬಿಸಿಲು ಇರುವಾಗ ಅಥವಾ ಮನೆಯೊಳಗೆ ತಂಪು ಕಡಿಮೆ ಇರುವಾಗ ಸ್ಥಾನ ಮಾಡುವುದು ಒಳಿತು. ಚಳಿಗಾಲದಲ್ಲಿ ಸ್ನಾನದ ಅವಧಿಯನ್ನು 5 ರಿಂದ 10 ನಿಮಿಷಕ್ಕೆ ಸೀಮಿತಗೊಳಿಸಿ. ಹೆಚ್ಚು ಹೊತ್ತು ನೀರಿನಲ್ಲಿದ್ದರೆ ಮಗುವಿಗೆ ಶೀತವಾಗಬಹುದು.
3. ಸಾಬೂನು ಮತ್ತು ಶಾಂಪೂ ಬಳಕೆ
ಕೆಮಿಕಲ್ ಮುಕ್ತ ಅಥವಾ ಮೃದುವಾದ (Mild/pH balanced) ಸಾಬೂನುಗಳನ್ನು ಬಳಸಿ.
4. ಸ್ನಾನಕ್ಕೆ ಮುನ್ನ ಮಸಾಜ್
ಸ್ನಾನ ಮಾಡಿಸುವ ಮೊದಲು ಮಗುವಿನ ದೇಹಕ್ಕೆ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯಿಂದ ಹಗುರವಾಗಿ ಮಸಾಜ್ ಮಾಡಿ. ಇದು ಚರ್ಮದ ತೇವಾಂಶವನ್ನು ಕಾಪಾಡಲು ಸಹಾಯ ಮಾಡುತ್ತದೆ ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.
ಇನ್ನೂ ಸ್ಥಾನದ ಬಳಿಕ ತಕ್ಷಣವೇ ಒಣ ಬಟ್ಟೆಯಿಂದ ಮೈ ಹಾಗೂ ತಲೆಯನ್ನು ಒರೆಸಿ. ತಕ್ಷಣವೇ ಮಗುವಿಗೆ ಬೆಚ್ಚಗಿನ ಹತ್ತಿ ಬಟ್ಟೆಗಳನ್ನು ಧರಿಸಿರಿ. ತಲೆಗೂ ಸರಿಯಾಗಿ ಟವೆಲ್ ಸುತ್ತಿ ಒಣಗಿಸಿ.