Publish Date: Fri, 09 Jan 2026 (12:27 IST)
Updated Date: Fri, 09 Jan 2026 (12:29 IST)
ಅಸಿಡಿಟಿ ಸಮಸ್ಯೆ ಹೆಚ್ಚಾದಾಗ ಹೊಟ್ಟೆ ತೊಳೆಸಿದಂತಾಗಿ ಏನೂ ತಿನ್ನಲು ಸೇರದ ಪರಿಸ್ಥಿತಿಯಾಗುತ್ತದೆ. ಅಸಿಡಿಟಿಯಿಂದ ಹೊಟ್ಟೆ ತೊಳೆಸಿದಂತಾಗುತ್ತಿದ್ದರೆ ಏನು ಮಾಡಬೇಕು ಇಲ್ಲಿದೆ ಟಿಪ್ಸ್.
ಶುಂಠಿ ಬಳಸಿ: ಯಾವುದೇ ರೀತಿಯ ವಾಕರಿಕೆ ತಡೆಯಲು ಶುಂಠಿ ಬೆಸ್ಟ್ ಮದ್ದು. ಒಂದು ಪೀಸ್ ಶುಂಠಿಯನ್ನು ಬಾಯಲ್ಲಿಟ್ಟುಕೊಂಡು ಜಗಿಯುತ್ತಿರಿ. ಇದರಿಂದ ಹೊಟ್ಟೆ ತೊಳೆಸುವಿಕೆ ಕಡಿಮೆಯಾಗುತ್ತದೆ.
ಕೋಲ್ಡ್ ಹಾಲು: ಸ್ವಲ್ಪ ಕೋಲ್ಡ್ ಹಾಲು ಸೇವಿಸುವುದರಿಂದ ಅಸಿಡಿಟಿಯ ಕಿರಿ ಕಿರಿ ಕಡಿಮೆಯಾಗುವುದಲ್ಲದೆ ವಾಕರಿಕೆ ಕಡಿಮೆಯಾಗುವುದು.
ಸೋಪು ಕಾಳು: ಒಂದು ಟೀ ಸ್ಪೂನ್ ನಷ್ಟು ಸೋಂಪು ಕಾಳುಗಳನ್ನು ಬಾಯಿಗೆ ಹಾಕಿಕೊಳ್ಳಿ. ಇದನ್ನು ಜಗಿಯುವುದರಿಂದ ಅಸಿಡಿಟಿಯೂ ಕಡಿಮೆಯಾಗುತ್ತದೆ.
ಎಳೆನೀರು: ದೇಹ ಪಿಎಚ್ ಲೆವೆಲ್ ಹೆಚ್ಚಿಸುವುದಲ್ಲದೆ ಅಸಿಡಿಟಿಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
ನೆನಪಿರಲಿ, ಹೊಟ್ಟೆ ತೊಳೆಸಿದಂತಾಗುತ್ತಿದ್ದರೆ ಯಾವುದೇ ಪಾನೀಯಗಳನ್ನು ಸೇವಿಸುವಾಗ ಒಟ್ಟಿಗೇ ಕುಡಿಯುವ ಬದಲು ಸಿಪ್ ಮಾಡಿಕೊಂಡು ಸ್ವಲ್ಪ ಸ್ವಲ್ಪವೇ ಸೇವಿಸಿ. ಸ್ವಲ್ಪ ತಲೆ ಎತ್ತರವಾಗಿರುವಂತೆ ಮಲಗಿಕೊಳ್ಳಿ.