ನಿಯಮಿತವಾಗಿ ಬಿಯರ್ ಕುಡಿದರೆ ಹೊಟ್ಟೆ ದಪ್ಪ ಆಗುತ್ತದೆ, ಬೆಲ್ಲಿ ಫ್ಯಾಟ್ ಬರುತ್ತದೆ ಎನ್ನುತ್ತಾರೆ. ಇದು ನಿಜವೇ? ನಿಜವಾಗಿದ್ದರೆ ಇದಕ್ಕೆ ಕಾರಣವೇನು ಇಲ್ಲಿದೆ ನೋಡಿ ವಿವರ.
ಬಿಯರ್ ಕುಡಿದರೆ ಹೊಟ್ಟೆ ದಪ್ಪವಾಗುವುದು ಖಂಡಿತಾ ನಿಜ. ಇದಕ್ಕೆ ಮುಖ್ಯ ಕಾರಣ ಇದರಲ್ಲಿರುವ ಗ್ಯಾಸ್ ಅಂಶ. ಬಿಯರ್ ತಯಾರಿ ಮಾಡಲು ಬಳಸುವ ವಸ್ತುವಿನಿಂದಾಗಿ ಇದು ಅಸಿಡಿಕ್ ಆಗಿ ಪರಿಣಮಿಸುತ್ತದೆ. ಇದು ಗ್ಯಾಸ್ ಉತ್ಪತ್ತಿ ಮಾಡುತ್ತದೆ.
ಬಿಯರ್ ನಿಂದ ಹೊರಹೊಮ್ಮು ಗ್ಯಾಸ್ ನಮ್ಮ ಕರುಳಿನ ಮೇಲೆ ಪರಿಣಾಮ ಬೀರುತ್ತದೆ. ಇದು ಹೊಟ್ಟೆ ದಪ್ಪವಾಗುವುದಕ್ಕೆ ಕಾರಣವಾಗುತ್ತದೆ. ಬಿಯರ್ ಮಾತ್ರವಲ್ಲ ನಿಯಮಿತವಾಗಿ ಸೋಡಾ ಹಾಕಿದ ಪಾನೀಯ ಸೇವಿಸಿದರೂ ಹೊಟ್ಟೆ ದಪ್ಪವಾಗುವುದು.
ಬಿಯರ್ ನಲ್ಲಿರುವ ಸೋಡಾ ಅಥವಾ ಗ್ಯಾಸ್ ಅಂಶ ಕೊಂಚ ಕಡಿಮೆಯಾಗಬೇಕು ಎಂದರೆ ಇದಕ್ಕೆ ಸಾಕಷ್ಟು ನೀರು ಸೇರಿಸಿ ಸೇವನೆ ಮಾಡಬೇಕು. ಇದರಿಂದ ಅಸಿಡಿಕ್ ಅಂಶ ದೇಹ ಸೇರುವುದು ಕೊಂಚ ಮಟ್ಟಿಗೆ ಕಡಿಮೆಯಾಗುತ್ತದೆ.