ಸಾಮಾನ್ಯವಾಗಿ ಮೊಟ್ಟೆ ಒಟ್ಟಿಗೇ ತಂದು ಫ್ರಿಡ್ಜ್ ನಲ್ಲಿಟ್ಟು ತಿನ್ನುವ ಅಭ್ಯಾಸ ನಮಗಿರುತ್ತದೆ. ಆದರೆ ತುಂಬಾ ದಿನ ಮೊಟ್ಟೆ ಫ್ರಿಡ್ಜ್ ನಲ್ಲಿಡುವುದೂ ಆರೋಗ್ಯಕರವಲ್ಲ. ಎಷ್ಟು ದಿನ ಮೊಟ್ಟೆಯನ್ನು ಫ್ರಿಡ್ಜ್ ನಲ್ಲಿಟ್ಟುಕೊಳ್ಳಬಹುದು? ಇಲ್ಲಿದೆ ವಿವರ.
ಮೊಟ್ಟೆಯನ್ನು ಮುಖ್ಯವಾಗಿ ಫ್ರಿಡ್ಜ್ ನ ಡೋರ್ ನಲ್ಲಿಟ್ಟುಕೊಳ್ಳಿ. ಆದಷ್ಟು ಫ್ರೆಶ್ ಮೊಟ್ಟೆಗಳನ್ನು ಖರೀದಿಸಿ ಅದರ ಕವರ್ ನಲ್ಲೇ ಹಾಕಿಡಿ. ಬೇರೆ ಪಾತ್ರೆಗಳಲ್ಲಿ ಹಾಕಿ ಸ್ಟೋರ್ ಮಾಡುವುದರಿಂದ ಕೊಳೆತು ಹೋಗುವ ಅಥವಾ ವಾಸನೆ ಬರುವ ಸಂಭವ ಹೆಚ್ಚು. ಹಾಗಿದ್ದರೆ ಫ್ರಿಡ್ಜ್ ನಲ್ಲಿ ಎಷ್ಟು ದಿನ ಇಟ್ಟುಕೊಳ್ಳಬಹುದು ನೋಡಿ.
ಹಸಿ ಮೊಟ್ಟೆ- 3 ರಿಂದ 5 ವಾರ ಕಾಲ ಫ್ರಿಡ್ಜ್ ನಲ್ಲಿಟ್ಟುಕೊಳ್ಳಬಹುದು.
ಶೆಲ್ ಸಮೇತ ಚೆನ್ನಾಗಿ ಬೇಯಿಸಿದ ಮೊಟ್ಟೆ- 1 ವಾರ ಇಟ್ಟುಕೊಳ್ಳಬಹುದು.
ಹಸಿ ಬಿಳಿ ಅಥವಾ ಹಳದಿ- 2 ರಿಂದ ನಾಲ್ಕು ದಿನ ಮಾತ್ರ ಇಟ್ಟುಕೊಳ್ಳಬಹುದು.
ಮೊಟ್ಟೆಯಿಂದ ತಯಾರಿಸಿದ ಆಹಾರಗಳು- 3 ರಿಂದ 4 ದಿನಗಳು
ಇದಕ್ಕಿಂತ ಹೆಚ್ಚು ದಿನ ಮೊಟ್ಟೆಯನ್ನು ಫ್ರಿಡ್ಜ್ ನಲ್ಲಿಟ್ಟುಕೊಂಡು ಸೇವನೆ ಮಾಡುವುದು ಆರೋಗ್ಯಕರ ಅಭ್ಯಾಸವಲ್ಲ. ಇದು ಹೊಟ್ಟೆ ಹಾಳು ಮಾಡಬಹುದು.