Select Your Language

Notifications

webdunia
webdunia
webdunia
webdunia

ಚಳಿಗಾಲದಲ್ಲಿ ಎಳನೀರನ್ನು ಕುಡಿಯಬಹುದೇ, ಇಲ್ಲಿದೆ ಉತ್ತರ

Tender Coconut Health Benefits

Sampriya

ಬೆಂಗಳೂರು , ಗುರುವಾರ, 1 ಜನವರಿ 2026 (14:17 IST)
Photo Credit X
ಎಳನೀರನ್ನು ಚಳಿಗಾಲದಲ್ಲಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೇ ಎಂಬ ಗೊಂದಲ ಹೆಚ್ಚಿನವರಲ್ಲಿ ಇದೆ. 

ಎಳನೀರು ದೇಹಕ್ಕೆ ತಂಪಾಗಿದ್ದು, ಚಳಿಗಾಲದಲ್ಲಿ ಇದನ್ನು ಮಿತವಾಗಿ ಕುಡಿಯುವುದಿರಂದ ಆರೋಗ್ಯಕ್ಕೆ ಕೆಲವು ಅದ್ಭುತ ಪ್ರಯೋಜಗಳನ್ನು ಪಡೆಯಬಹುದು. 

ಎಳನೀರನ್ನು ಮಿತವಾಗಿ ಕುಡಿಯುವುದರಿಂದ ಆರೋಗ್ಯದ ಮೇಲಾಗುವ ಪ್ರಯೋಜನಗಳು ಇಲ್ಲಿದೆ. 

ಚರ್ಮದ ಆರೋಗ್ಯ: ಚಳಿಗಾಲದಲ್ಲಿ ಚರ್ಮ ಒಣಗುವುದು ಸಾಮಾನ್ಯ. ಎಳನೀರು ದೇಹವನ್ನು ಒಳಗಿನಿಂದ ಹೈಡ್ರೇಟ್ ಮಾಡಿ, ಚರ್ಮದ ತೇವಾಂಶವನ್ನು ಕಾಪಾಡುತ್ತದೆ ಮತ್ತು ನೈಸರ್ಗಿಕ ಹೊಳಪನ್ನು ನೀಡುತ್ತದೆ.


ರೋಗನಿರೋಧಕ ಶಕ್ತಿ: ಇದರಲ್ಲಿರುವ ಆಂಟಿ-ವೈರಲ್ ಮತ್ತು ಆಂಟಿ-ಬ್ಯಾಕ್ಟೀರಿಯಲ್ ಗುಣಗಳು ಚಳಿಗಾಲದಲ್ಲಿ ಹರಡುವ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆ: ಚಳಿಗಾಲದಲ್ಲಿ ವ್ಯಾಯಾಮ ಕಡಿಮೆ ಇರುವುದರಿಂದ ಜೀರ್ಣಕ್ರಿಯೆ ನಿಧಾನವಾಗಬಹುದು. ಎಳನೀರು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಮಲಬದ್ಧತೆಯನ್ನು ತಡೆಯಲು ಸಹಕಾರಿ.

ರಕ್ತದೊತ್ತಡ ನಿಯಂತ್ರಣ: ಇದರಲ್ಲಿರುವ ಪೊಟ್ಯಾಸಿಯಮ್ ಅಂಶವು ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

ನೆನಪಿರಲಿ - ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕಾಗುತ್ತದೆ. 

ಸಮಯ: ಎಳನೀರನ್ನು ಬೆಳಿಗ್ಗೆ ಅಥವಾ ಮಧ್ಯಾಹ್ನದ ಸಮಯದಲ್ಲಿ ಕುಡಿಯುವುದು ಉತ್ತಮ. ರಾತ್ರಿ ವೇಳೆ ಅಥವಾ ತಡಸಂಜೆ ಕುಡಿಯುವುದರಿಂದ ಶೀತ ಅಥವಾ ಕೆಮ್ಮು ಉಂಟಾಗುವ ಸಾಧ್ಯತೆ ಇರುತ್ತದೆ.

ತಾಪಮಾನ: ಫ್ರಿಡ್ಜ್‌ನಲ್ಲಿಟ್ಟ ಎಳನೀರನ್ನು ಕುಡಿಯಬೇಡಿ. ಬದಲಿಗೆ, ಸಾಮಾನ್ಯ ತಾಪಮಾನದಲ್ಲಿರುವ ಎಳನೀರನ್ನು ಕುಡಿಯಿರಿ.

ಅತಿಯಾದ ಸೇವನೆ ಬೇಡ: ಶೀತದ ಪ್ರಕೃತಿ ಇರುವವರು ಅಥವಾ ಸೈನಸ್ ಸಮಸ್ಯೆ ಇರುವವರು ದಿನಕ್ಕೆ ಒಂದು ಎಳನೀರಿಗಿಂತ ಹೆಚ್ಚು ಕುಡಿಯಬಾರದು.

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ಮಲಗಿದ ತಕ್ಷಣ ನಿದ್ದೆ ಬೀಳಲು ಈ ಅಭ್ಯಾಸ ಅನುಸರಿಸಿ