Select Your Language

Notifications

webdunia
webdunia
webdunia
webdunia

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

Stomach pain

Krishnaveni K

ಬೆಂಗಳೂರು , ಸೋಮವಾರ, 8 ಡಿಸೆಂಬರ್ 2025 (13:46 IST)
ಚಳಿಗಾಲದಲ್ಲಿ ಜೀರ್ಣಶಕ್ತಿ ಕಡಿಮೆಯಾಗಿರುತ್ತದೆ. ನಾವು ತಿಂದ ಆಹಾರ ಚಳಿಗಾಲದಲ್ಲಿ ಬೇಗ ಜೀರ್ಣವಾಗದೇ ಅಜೀರ್ಣದಂತಹ ಸಮಸ್ಯೆ ಬರಬಹುದು. ಹೀಗಾಗಿ ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು ಇಲ್ಲಿದೆ ಉಪಾಯಗಳು.

ಬಿಸಿ ಮತ್ತು ಬೇಯಿಸಿದ ಆಹಾರ: ಚಳಿಗಾದಲ್ಲಿ ಬಿಸಿಯಾದ ಮತ್ತು ಚೆನ್ನಾಗಿ ಬೇಯಿಸಿದ ಆಹಾರಗಳನ್ನು ಹೆಚ್ಚು ಸೇವಿಸಿ. ಹಸಿ ತರಕಾರಿಗಳು, ತಂಪಾದ ಆಹಾರಗಳನ್ನು ಸೇವಿಸಬೇಡಿ. ಬಿಸಿ ಬಿಸಿಯಾದ ಸೂಪ್ ಗಳು, ಸುಟ್ಟ ಗೆಡ್ಡೆ-ಗೆಣಸು ತರಕಾರಿಗಳನ್ನು ಸೇವಿಸಬೇಕು.

ಫೈಬರ್ ಅಂಶ ಹೆಚ್ಚು ಇರಲಿ: ಆಹಾರದಲ್ಲಿ ನಾರಿನಂಶ ಹೆಚ್ಚು ಇರುವ ಆಹಾರ ಸೇವನೆ ಮಾಡಿ. ಸಿಹಿ ಗೆಣಸು, ಬೀನ್ಸ್, ಬಸಳೆ ಅಥವಾ ಪಾಲಕ್ ಸೊಪ್ಪು ಹೆಚ್ಚು ಬಳಸಿ. ಅದೇ ರೀತಿ ಓಟ್ಸ್, ಇಡೀ ಧಾನ್ಯ, ಮಿಲ್ಲೆಟ್ ಗಳನ್ನು ಹೆಚ್ಚು ಬಳಸಿ.

ನೀರಿನಂಶ ಹೆಚ್ಚು ಸೇವನೆ ಮಾಡಿ: ಚಳಿಗಾಲದಲ್ಲಿ ಬಾಯಾರಿಕೆ ಆಗುವುದು ಕಡಿಮೆ. ಆದರೆ ಈ ಸಂದರ್ಭದಲ್ಲಿಯೇ ನಮ್ಮ ದೇಹಕ್ಕೆ ಹೆಚ್ಚು ನೀರು ಬೇಕಾಗುತ್ತದೆ. ದೇಹ ನಿರ್ಜಲೀಕರಣಕ್ಕೊಳಗಾಗದಂತೆ ನೋಡಿಕೊಳ್ಳಬೇಕು. ಬಿಸಿಯಾದ ನೀರು, ಕಷಾಯಗಳು, ಗ್ರೀನ್ ಟೀ, ಶುಂಠಿ ನೀರು ಸೇವನೆ ಮಾಡುತ್ತಿರಿ. ಇದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗುವಾಗ ವಯಸ್ಸಿನಲ್ಲಿ ಹುಡುಗಿ ದೊಡ್ಡಳಾಗಿದ್ರೆ ಏನ್ ಸಮಸ್ಯೆ, ಡಾ.ಪದ್ಮಿನಿ ಪ್ರಸಾದ್‌ ಏನ್‌ ಹೇಳ್ತಾರೆ