ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದರೂ ಅಪಾಯ, ಕಡಿಮೆಯಾದರೆ ಇನ್ನೂ ಅಪಾಯ. ಲೋ ಬ್ಲಡ್ ಶುಗರ್ ಆದರೆ ತಕ್ಷಣವೇ ಏನು ಮಾಡಬೇಕು ಇಲ್ಲಿದೆ ಟಿಪ್ಸ್.
ಲೋ ಬ್ಲಡ್ ಶುಗರ್ ಲಕ್ಷಣಗಳೇನು?
ಬ್ಲಡ್ ಶುಗರ್ ಲೆವೆಲ್ ಕಡಿಮೆಯಾದರೆ ಅಸಹಜ ಬೆವರು, ಕೈ ಕಾಲು ನಡುಗುವುದು, ಆತಂಕ, ಹೃದಯ ಬಡಿತ ಜೋರಾಗುವುದು, ಗೊಂದಲದ ಮನಸ್ಥಿತಿ ಅನುಭವಿಸುತ್ತೀರಿ.
ಏನು ಮಾಡಬೇಕು?
-ಒಂದು ವೇಳೆ ಡ್ರೈವಿಂಗ್ ಅಥವಾ ಯಾವುದೇ ಕೆಲಸ ಮಾಡುತ್ತಿದ್ದರೆ ತಕ್ಷಣವೇ ನಿಲ್ಲಿಸಿ.
-ಅರ್ಧಕಪ್ ನಷ್ಟು ಸಕ್ಕರೆ ದ್ರಾವಣವನ್ನು ತಕ್ಷಣವೇ ಸೇವಿಸಿ.
-ಅರ್ಧಕಪ್ ನಷ್ಟು ಆಪಲ್ ಅಥವಾ ಕಿತ್ತಳೆ ಹಣ್ಣಿನ ಜ್ಯೂಸ್ ಸೇವನೆ ಮಾಡಿ.
-ಚಾಕಲೇಟ್, ಶುಗರ್ ಕ್ಯಾಂಡಿಯಂತಹ ಯಾವುದಾದರೂ ವಸ್ತು ಇದ್ದರೆ ಬಾಯಲ್ಲಿಟ್ಟುಕೊಳ್ಳಿ.
- ಇವನ್ನೆಲ್ಲಾ ಸೇವಿಸಿದರೆ ಅದು ರಕ್ತಕ್ಕೆ ಸೇರಲು 15 ನಿಮಿಷ ಬೇಕಾಗುವುದು. ಹೀಗಾಗಿ ಅಷ್ಟು ಹೊತ್ತು ಕಾಯಬೇಕು.
-ನಂತರವೂ ಶುಗರ್ ಲೆವೆಲ್ ನಾರ್ಮಲ್ ಸ್ಥಿತಿಗೆ ಬಾರದೇ ಇದ್ದರೆ ತಕ್ಷಣವೇ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು.
ಆಹಾರದಲ್ಲಿ ಈ ಕ್ರಮವಿರಲಿ
ವಿಶೇಷವಾಗಿ ಲೋ ಬ್ಲಡ್ ಶುಗರ್ ಲೆವೆಲ್ ಸಮಸ್ಯೆಯಿರುವವರು ತಮ್ಮ ಆಹಾರವನ್ನು ನಿಗದಿತ ಸಮಯಕ್ಕೆ ಸೇವಿಸಬೇಕು. ಆಹಾರದಲ್ಲಿ ಕಾರ್ಬೋಹೈಡ್ರೇಟ್ ಅಂಶ ಹೆಚ್ಚು ಇರುವಂತೆ ನೋಡಿಕೊಳ್ಳಬೇಕು.