ಪ್ರತಿಯೊಬ್ಬ ಮನುಷ್ಯನೂ ಆರೋಗ್ಯವಾಗಿರಬೇಕೆಂದು ಬಯಸುತ್ತಾರೆ. ಆದರೆ ಆರೋಗ್ಯವಾಗಿರಬೇಕೆಂದರೆ ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಇದೇ ಎಂದು ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಸಂವಾದವೊಂದರಲ್ಲಿ ಹೀಗೆ ಹೇಳಿದ್ದರು.
ಸಾಮಾನ್ಯವಾಗಿ ನಾವು ಖಾಯಿಲೆ ಬಂದ ತಕ್ಷಣ ವೈದ್ಯರ ಬಳಿಗೆ ಓಡುತ್ತೇವೆ. ಅವರು ಕೊಡುವ ಗುಳಿಗೆ, ಸಿರಪ್ ಗಳನ್ನು ಸೇವಿಸುತ್ತೇವೆ. ಅಲ್ಲಿಗೆ ನಮ್ಮ ಆರೋಗ್ಯ ಸರಿಯಾಯಿತೆಂದು ಅಂದುಕೊಳ್ಳುತ್ತೇವೆ. ಆದರೆ ಇದಿಷ್ಟೇ ಸಾಕಾಗಲ್ಲ.
ಡಾ ಸಿಎನ್ ಮಂಜುನಾಥ್ ಪ್ರಕಾರ ನಾವು ಆರೋಗ್ಯವಾಗಿರಬೇಕೆಂದರೆ ನಾವು ಮುಖ್ಯವಾಗಿ ಈ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಅವುಗಳೆಂದರೆ ನಿಸರ್ಗ ಅಂದರೆ ಸೂರ್ಯನ ಬೆಳಕು, ನಗು, ಉತ್ತಮರ ಗೆಳೆತನ, ಡಯಟ್. ಇವಿಷ್ಟನ್ನು ಸರಿಯಾಗಿ ಪಾಲಿಸಿದರೆ ಯಾವುದೇ ಔಷಧಿ ಬೇಡ.
ನಿಸರ್ಗ ಎಂದರೆ ದೇಹಕ್ಕೆ ಸರಿಯಾಗಿ ಸೂರ್ಯನ ಬೆಳಕು ಸೋಕಬೇಕು. ಸದಾ ನಗು ನಗುತ್ತಾ ಇದ್ದರೆ ಮನಸ್ಸಿನ ದುಃಖಗಳನ್ನು ಮರೆಯುತ್ತೇವೆ. ಉತ್ತಮರ ಗೆಳೆತನ ಮಾಡಿದರೆ ಸದಾ ಒಳ್ಳೆಯದನ್ನೇ ಯೋಚಿಸುತ್ತೇವೆ. ಉತ್ತಮ ಆಹಾರ ಶೈಲಿ ನಮ್ಮದಾಗಿದ್ದರೆ ಯಾವುದೇ ರೋಗ ಸುಳಿಯದು ಎನ್ನುವುದು ಅವರ ಅಭಿಪ್ರಾಯವಾಗಿದೆ.