Publish Date: Wed, 31 Dec 2025 (13:48 IST)
Updated Date: Wed, 31 Dec 2025 (16:00 IST)
ರಕ್ತ ಕೂಡಾ ಹೆಪ್ಪುಗಟ್ಟುವಷ್ಟು ಚಳಿ ಎಂದು ನಾವು ಹೇಳುತ್ತೇವೆ. ಹಾಗಿದ್ದರೆ ಚಳಿಗಾಲದಲ್ಲಿ ನಿಜವಾಗಿಯೂ ರಕ್ತಹೆಪ್ಪುಗಟ್ಟುತ್ತಾ? ಏನು ಅಪಾಯಗಳಿವೆ ನೋಡಿ.
ಚಳಿಗಾಲದಲ್ಲಿ ಇತರೆ ಹವಾಮಾನಗಳಿಗೆ ಹೋಲಿಸಿದರೆ ರಕ್ತ ಹೆಚ್ಚು ಮಂದವಾಗುತ್ತದೆ. ವಿಪರೀತ ಚಳಿಯಿಂದ ನಮ್ಮ ದೇಹದಲ್ಲಿ ರಕ್ತಪರಿಚಲನೆ ಸುಗಮವಾಗಿ ನಡೆಯುವುದಿಲ್ಲ. ಸ್ವಲ್ಪ ನಿಧಾನವಾಗುತ್ತದೆ. ಇದಕ್ಕೆ ರಕ್ತ ಮಂದವಾಗುವುದು ಕಾರಣ.
ಇದರಿಂದ ಗಂಭೀರ ಸಮಸ್ಯೆಗಳೂ ಎದುರಾಗಬಹುದು. ವಿಪರೀತ ಚಳಿಯಿಂದ ಹೃದಯಾಘಾತ, ಪಕ್ಷಪಾತದಂತಹ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಬಹುದು. ರಕ್ತನಾಳಗಳಲ್ಲಿ ಅಲ್ಲಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ಹೃದಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ರಕ್ತ ಪೂರೈಕೆಯಾಗದೇ ಸಮಸ್ಯೆಯಾಗಬಹುದು.
ಇದಕ್ಕೆ ಪರಿಹಾರವೇನು?
-ಚಳಿಗಾಲದಲ್ಲಿ ಆದಷ್ಟು ಬೆಚ್ಚನೆಯ ಪರಿಸರದಲ್ಲಿರಬೇಕು ಮತ್ತು ಬೆಚ್ಚನೆಯ ಆಹಾರ ಸೇವಿಸಬೇಕು.
-ಎಲ್ಲಕ್ಕಿಂತ ಮುಖ್ಯವಾಗಿ ದೇಹಕ್ಕೆ ಸಾಕಷ್ಟು ನೀರಿನಂಶ ಸೇರುವಂತೆ ನೋಡಿಕೊಳ್ಳಬೇಕು. ದೇಹ ನಿರ್ಜಲೀಕರಣಕ್ಕೊಳಗಾದಾಗ ರಕ್ತ ಹೆಪ್ಪುಗಟ್ಟುವ ಸಂಭವ ಹೆಚ್ಚು.
-ಚಳಿಗೆ ಸೋಮಾರಿಗಳಂತೆ ಕೂತಲ್ಲೇ ಕೂರುವ ಬದಲು ದೇಹಕ್ಕೆ ವ್ಯಾಯಾಮ ನೀಡುವಂತಹ ಚಟುವಟಿಕೆಗಳನ್ನು ಮಾಡುತ್ತಿರಬೇಕು. ಆಗ ರಕ್ತ ಪರಿಚಲನೆ ಸುಗಮವಾಗುತ್ತದೆ.
ಲಕ್ಷಣಗಳೇನು?
ಸಡನ್ ಆಗಿ ಒಂದು ಕಾಲಿನಲ್ಲಿ ನೋವು, ಎದೆ ನೋವು, ತಲೆನೋವು, ಅಸಹಜವಾಗಿ ದೇಹದಲ್ಲಿ ಊತ, ಉಸಿರಾಟಕ್ಕೆ ತೊಂದರೆಯಾಗುವುದು ರಕ್ತ ಹೆಪ್ಪುಗಟ್ಟುವುದರ ಲಕ್ಷಣವಾಗಿದ್ದು, ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.