ಕೆಲವರಿಗೆ ರಾತ್ರಿ ಮಲಗಿ ಬೆಳಿಗ್ಗೆ ಏಳುವ ಹೊತ್ತಿಗೆ ವಿಪರೀತ ಎನ್ನುವಷ್ಟು ಕುತ್ತಿಗೆ ನೋವು ಬಂದು ಬಿಡುತ್ತದೆ. ಇದಕ್ಕೆ ಪರಿಹಾರವೇನು ಇಲ್ಲಿದೆ ಟಿಪ್ಸ್.
ಕುತ್ತಿಗೆ ನೋವು ಬಂತೆಂದರೆ ನೇರವಾಗಿ ಕುಳಿತುಕೊಂಡು ದೈನಂದಿನ ಕೆಲಸ ಮಾಡಲೂ ಆಗದ ಯಮ ಯಾತನೆ. ರಾತ್ರಿ ಮಲಗುವ ಭಂಗಿಯಿಂದಾಗಿ ಕುತ್ತಿಗೆ ನೋವು ಬರಬಹುದು. ಇದರಿಂದ ಸಹಿಸಲಾಗದ ನೋವು ಅನುಭವಿಸಬೇಕಾಗುತ್ತದೆ. ಇದಕ್ಕೆ ಪರಿಹಾರವೇನು ಇಲ್ಲಿದೆ ನೋಟಿ ಟಿಪ್ಸ್.
-ಎರಡು-ಮೂರು ತಲೆದಿಂಬು ಇಟ್ಟುಕೊಂಡಾಗ ಕುತ್ತಿಗೆ ಸಿ ಆಕಾರದಂತೆ ಬಾಗಿ ನೋವು ಬರಬಹುದು. ಹೀಗಾಗಿ ಒಂದಕ್ಕಿಂತ ಹೆಚ್ಚು ತಲೆದಿಂಬು ಇಟ್ಟುಕೊಳ್ಳಬೇಡಿ.
-ಆದಷ್ಟು ನಿಮ್ಮ ತಲೆ ಭಾಗ ಕುತ್ತಿಗೆಯಿಂದ ತುಂಬಾ ಎತ್ತರದಲ್ಲಿರುವುದನ್ನು ಅವಾಯ್ಡ್ ಮಾಡಿ. ಆದಷ್ಟು ಸಮತಟ್ಟಾದ ಹಾಸಿಗೆಯಲ್ಲಿ ಮಲಗಿ.
-ಹೊಟ್ಟೆ ಕೆಳಭಾಗಕ್ಕೆ ತಾಕುವಂತೆ ಮಲಗಿದಾಗ ಕುತ್ತಿಗೆ ಓರೆಯಾಗಿಟ್ಟುಕೊಳ್ಳುತ್ತೀರಿ. ಹೀಗೆ ಮಾಡುವುದರಿಂದ ಕುತ್ತಿಗೆ ನೋವು ಬರಬಹುದು. ಈ ಭಂಗಿಯಲ್ಲಿ ಮಲಗುವುದನ್ನು ತಪ್ಪಿಸಿ.
-ಓರೆಯಾಗಿ ಅಥವಾ ಒಂದು ಮಗ್ಗುಲಿಗೆ ಮಲಗುವ ಅಭ್ಯಾಸವಿದ್ದರೆ ಮೊಣಕಾಲಿನ ಬಳಿ ತಲೆದಿಂಬು ಇಟ್ಟುಕೊಳ್ಳಿ. ಆಗ ನಿಮ್ಮ ಬೆನ್ನುಲುಬು ಸಡಿಲವಾಗಿ ಕುತ್ತಿಗೆ ಮೇಲೆ ಹೆಚ್ಚು ಭಾರ ಬೀಳದಂತೆ ನೋಡಿಕೊಳ್ಳುತ್ತದೆ.
ಈ ರೀತಿ ಕುತ್ತಿಗೆ ನೋವು ಬಂದಾಗ ಅತಿಯಾಗಿ ಮಸಾಜ್ ಮಾಡಲು ಹೋಗಬೇಡಿ. ಬದಲಾಗಿ ನೋವು ನಿವಾರಕವನ್ನು ಹಚ್ಚಿದರೆ ಸಾಕು. ಬಿಸಿ ಶಾಖ ನೀಡಬಹುದು ಮತ್ತು ಸಂಪೂರ್ಣ ವಿಶ್ರಾಂತಿ ಪಡೆಯಬೇಕು.