ಇಂದು ಬಹುತೇಕರು ತಮ್ಮ ಜೀವನ ಶೈಲಿಯಿಂದಾಗಿ ಕೀಲು ನೋವಿನಿಂದ ಬಳಲುತ್ತಿದ್ದಾರೆ. ಕೀಲು ನೋವು ಅಥವಾ ಆರ್ಥರೈಟಿಸ್ ಇದ್ದಲ್ಲಿ ನಮ್ಮ ಆಹಾರ ಕ್ರಮವನ್ನು ಬದಲಿಸಬೇಕಾಗುತ್ತದೆ.
ಕೈ, ಕಾಲು, ಬೆರಳುಗಳು, ಮೊಣಕಾಲು ಎಂಬಂತೆ ಎಲ್ಲಾ ಜಾಯಿಂಟ್ ಗಳಲ್ಲಿ ವಿಪರೀತ ನೋವು, ನಡೆದಾಡಲು, ದೈನಂದಿನ ಕೆಲಸ ಮಾಡಲು ಕಷ್ಟವಾಗುತ್ತದೆ. ಇಂತಹ ಪರಿಸ್ಥಿತಿಯಿದ್ದಾಗಿ ನಮ್ಮ ಆಹಾರ ಶೈಲಿಯಲ್ಲಿ ಸಾಕಷ್ಟು ಸೊಪ್ಪು ತರಕಾರಿಗಳು, ಹಣ್ಣು-ಹಂಪಲುಗಳನ್ನು ಸೇವನೆ ಮಾಡಬೇಕು.
ವಿಶೇಷವಾಗಿ ಕೀಲು ನೋವಿನಿಂದ ಬಳಲುತ್ತಿರುವವರು ಪ್ರತಿನಿತ್ಯ ಪಪ್ಪಾಯ ಹಣ್ಣುಗಳನ್ನು ಸೇವಿಸುವುದನ್ನು ಮರೆಯಬೇಡಿ. ಪಪ್ಪಾಯ ಹಣ್ಣಿನಲ್ಲಿ ಕೀಲು ನೋವು ಉಪಶಮನಗೊಳಿಸುವಂತಹ ಔಷಧೀಯ ಗುಣವಿದೆ ಎನ್ನಲಾಗುತ್ತದೆ.
ಪಪ್ಪಾಯದಲ್ಲಿ ವಿಟಮಿನ್ ಕೆ ಅಂಶ ಹೇರಳವಾಗಿದ್ದು ಇದು ಕೀಲು ನೋವಿನ ಶಮನಕ್ಕೆ ಉತ್ತಮವಾಗಿದೆ. ಕೀಲು ನೋವು ಇರುವವರು ಆದಷ್ಟು ಬೀನ್ಸ್, ಬಟಾಣಿ, ಸಂಸ್ಕರಿತ ಆಹಾರ, ಕರಿದ ತಿಂಡಿಗಳನ್ನು ಅವಾಯ್ಡ್ ಮಾಡುವುದು ಉತ್ತಮ.