ಮದುವೆ, ಶುಭ ಸಮಾರಂಭಗಳಿದ್ದಾಗ ಹೆಣ್ಣು ಮಕ್ಕಳಿಗೆ ಕೈಗೆ ಮೆಹಂದಿ ಹಾಕಿಕೊಳ್ಳುವುದೆಂದರೆ ತುಂಬಾ ಇಷ್ಟ. ಆದರೆ ಇಂತಹ ಸಮಸ್ಯೆಯಿರುವವರು ಮೆಹಂದಿ ಹಾಕಿಕೊಳ್ಳುವುದು ಉತ್ತಮವಲ್ಲ.
ಚರ್ಮದಲ್ಲಿ ಕಜ್ಜಿ, ನವೆ ಇದ್ದರೆ ಮೆಹಂದಿ ಹಾಕಿಕೊಳ್ಳಬೇಡಿ. ಕೆಲವರಿಗೆ ಮೆಹಂದಿ ಕೂಡಾ ಅಲರ್ಜಿ ಉಂಟು ಮಾಡುತ್ತದೆ. ವಿಶೇಷವಾಗಿ ಮಾರುಕಟ್ಟೆಗಳಲ್ಲಿ ಸಿಗುವ ಮೆಹಂದಿಗೆ ಕೆಲವೊಮ್ಮೆ ರಾಸಾಯನಿಕ ಅಥವಾ ಬಣ್ಣ ಮಿಕ್ಸ್ ಮಾಡುವ ಸಾಧ್ಯತೆಯಿರುತ್ತದೆ. ಇದು ಕೈ ಅಲರ್ಜಿ ಹೆಚ್ಚಿಸಬಹುದು.
ಅಲರ್ಜಿ ಇದ್ದಾಗ ಕೈಗೆ ಮೆಹಂದಿ ಹಾಕಿಕೊಳ್ಳುವುದರಿಂದ ಊತ, ಉರಿ ಹೆಚ್ಚಾಗಬಹುದು. ಕೆಲವರಿಗೆ ಇದು ಬ್ಯಾಕ್ಟೀರಿಯಾ ಅಥವಾ ಫಂಗಲ್ ಸೋಂಕು ಉಂಟಾಗಲು ಕಾರಣವಾಗಬಹುದು. ಈಗಾಗಲೇ ಫಂಗಸ್ ಆಗಿದ್ದರೂ ಸಮಸ್ಯೆ ಹೆಚ್ಚಾಗಬಹುದು.
ಕೆಲವೊಂದು ಸಂದರ್ಭದಲ್ಲಿ ಈ ಅಲರ್ಜಿ ಮತ್ತಷ್ಟು ಹೆಚ್ಚಾಗಿ ಕೈ ಮೇಲೆ ಕಲೆ ಉಳಿದುಕೊಳ್ಳಬಹುದು. ಕೆಲವರಿಗೆ ಕೈ ನೋವು ಬರಬಹುದು. ವಿಶೇಷವಾಗಿ ಹುಣ್ಣು, ಗಾಯಗಳಿದ್ದರೆ ಆ ಭಾಗಕ್ಕೆ ಮೆಹಂದಿ ಹಚ್ಚದೇ ಇರುವುದು ಉತ್ತಮ. ಇಲ್ಲದೇ ಇದ್ದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು.