ಇತ್ತೀಚೆಗಿನ ದಿನಗಳಲ್ಲಿ ಚಿಕ್ಕವಯಸ್ಸಿನವರಲ್ಲೂ ಹೃದಯಾಘಾತ ಕಂಡುಬರುತ್ತಿದೆ. ಇದಕ್ಕೆ ಮುಖ್ಯವಾಗಿ ಇದೊಂದು ವಿಚಾರ ಕಾರಣ ಎಂದು ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಅನೇಕ ಸಂವಾದಗಳಲ್ಲಿ ಹೇಳಿದ್ದಾರೆ.
ಹೃದಯಾಘಾತಕ್ಕೆ ಹಲವು ಕಾರಣಗಳಿರಬಹುದು. ನಾವು ಸೇವಿಸುವ ಆಹಾರ, ಜೀವನ ಶೈಲಿ, ವ್ಯಾಯಾಮ ಇಲ್ಲದೇ ಇರುವುದು ಇತ್ಯಾದಿ ಅನೇಕ ವಿಚಾರಗಳು ಹೃದಯದ ಸಮಸ್ಯೆ ಉದ್ಭವಿಸಲು ಕಾರಣವಾಗುತ್ತದೆ. ಆದರೆ ಡಾ ಸಿಎನ್ ಮಂಜುನಾಥ್ ಪ್ರಕಾರ ಎಲ್ಲಕ್ಕಿಂತ ದೊಡ್ಡ ಕಾರಣ ಮಾನಸಿಕ ಒತ್ತಡ.
ಹೃದಯ ಮಾತ್ರವಲ್ಲ ನಮ್ಮ ದೇಹದಲ್ಲಿ ಅನೇಕ ಆರೋಗ್ಯ ಸಮಸ್ಯೆಗೆ ಮೂಲ ಕಾರಣವೇ ಒತ್ತಡ ಎಂದು ಅವರು ಅನೇಕ ಬಾರಿ ಹೇಳುತ್ತಾರೆ. ವೃತ್ತಿಯಲ್ಲಿ ಒತ್ತಡವಿರಬಹುದು, ಸಾಂಸಾರಿಕ ಒತ್ತಡವಿರಬಹುದು ಇದೆಲ್ಲವೂ ಕಾರಣವಾಗುತ್ತದೆ.
ವಿಶೇಷವಾಗಿ ಒತ್ತಡ ಎನ್ನುವುದೇ ಇತ್ತೀಚೆಗಿನ ದಿನಗಳಲ್ಲಿ ತಂಬಾಕು, ಸಿಗರೇಟಿನಂತೆ ಅಪಾಯಕಾರಿ ಎಂದು ನಾವು ಪರಿಗಣಿಸುತ್ತೇವೆ. ಇದುವೇ ಅನೇಕ ರೋಗಗಳಿಗೆ ದಾರಿಯಾಗುತ್ತಿದೆ ಎಂದು ಡಾ ಸಿಎನ್ ಮಂಜುನಾಥ್ ಹೇಳುತ್ತಾರೆ.