ಇತ್ತೀಚೆಗಿನ ದಿನಗಳಲ್ಲಿ ಹೃದಯದ ಸಮಸ್ಯೆ ಸರ್ವೇ ಸಾಮಾನ್ಯವಾಗುತ್ತಿದೆ. ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಖ್ಯಾತ ವೈದ್ಯೆ ಡಾ ವಿಜಯಲಕ್ಷ್ಮೀ ಬಾಳೆಕುಂದ್ರಿಯವರು ಒಂದು ಸಂದರ್ಶನದಲ್ಲಿ ಸಿಂಪಲ್ ಟ್ರಿಕ್ಸ್ ಹೇಳಿದ್ದಾರೆ.
ಅವರು ಹೇಳಿರುವ ಈ ಟಿಪ್ಸ್ ಫಾಲೋ ಮಾಡಲು ನಿಮಗೆ ನಯಾಪೈಸೆ ಖರ್ಚು ಮಾಡಬೇಕಾಗಿಲ್ಲ. ಬದಲಾಗಿ ನೀವೇ ನಿಮ್ಮ ಮನಸ್ಥಿತಿ ಬದಲಾಯಿಸಿಕೊಂಡರೆ ಸಾಕು. ಅಷ್ಟಕ್ಕೂ ಅವರು ಹೇಳಿದ್ದೇನು ಇಲ್ಲಿದೆ ನೋಡಿ ವಿವರ.
ಮನಸ್ಸನ್ನು ಶಾಂತಿಯಾಗಿಟ್ಟುಕೊಂಡರೆ ಅದು ಒಳ್ಳೆಯದು. ಅದರಲ್ಲೂ ನಗು ನಗುತ್ತಾ ಇದ್ದರೆ ತುಂಬಾ ಒಳ್ಳೆಯದು. ಹಸನ್ಮುಖಿ ಸದಾ ಸುಖಿ ಎಂಬ ಮಾತೇ ಇದೆ. ಅದರಂತೆ ಯಾವತ್ತೂ ನಗು ನಗುತ್ತಾ ಇದ್ದರೆ ಹೃದಯದ ತೊಂದರೆ ಆಗುವುದಿಲ್ಲ
ಆದರೆ ಅದಲ್ಲದೆ ಮುಖ ಗಂಟಿಕ್ಕಿಕೊಂಡು ಏನೋ ಆಕಾಶವೇ ಕಳಚಿ ಬಿದ್ದಂತೆ, ಅಯ್ಯೋ ಇನ್ನೇನು ಎಂದು ಯೋಚನೆ ಮಾಡಿಕೊಂಡು ಕೂತಿದ್ದರೆ ಮೆದುಳಿನಿಂದ ಪೈಟೋಲೈಟ್ ಹಾರ್ಮೋನ್ ಉತ್ಪತ್ತಿಯಾಗಿ ಹೃದಯದ ರಕ್ತನಾಳಗಳು ಸಂಕುಚಿತಗೊಂಡು ಹೃದಯಾಘಾತವಾಗುತ್ತದೆ ಎನ್ನುವುದು ಅವರ ಅಭಿಪ್ರಾಯವಾಗಿದೆ.