ಬೆಂಗಳೂರು: ಆರು ತಿಂಗಳೊಳಗಿನ ಮಕ್ಕಳಿಗೆ ಕೆಮ್ಮು ಇದ್ದರೆ ಸಿರಪ್ ಕೊಡಬೇಡಿ. ಏನು ಮಾಡಬೇಕು ಎಂದು ಆರೋಗ್ಯ ಇಲಾಖೆ ಗೈಡ್ ಲೈನ್ಸ್ ನೀಡಿದೆ.
ದೇಶದಾದ್ಯಂತ ಇತ್ತೀಚೆಗೆ ಕೆಮ್ಮಿನ ಸಿರಪ್ ಸೇವಿಸಿ 11 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದರು. ಈ ಹಿನ್ನಲೆಯಲ್ಲಿ ಈಗ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು 6 ತಿಂಗಳೊಳಗಿನ ಮಕ್ಕಳಿಗೆ ಕೆಮ್ಮಿನ ಔಷಧಿ ನೀಡುವ ವಿಚಾರದಲ್ಲಿ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ.
ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲೂ ಈ ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ. ವಿಶೇಷವಾಗಿ ಇನ್ನು ಆರು ತಿಂಗಳೊಳಗಿನ ಮಕ್ಕಳಲ್ಲಿ ಕೆಮ್ಮು ಕಾಣಿಸಿಕೊಂಡರೆ ಸಿರಪ್ ಹಾಕಬಾರದು. ಬದಲಾಗಿ ಎದೆ ಹಾಲುಣಿಸಿದರೆ ಸಾಕು ಎಂದು ಸಲಹೆ ನೀಡಲಾಗಿದೆ.
-ಮಗುವಿಗೆ ನ್ಯುಮೋನಿಯಾದಂತಹ ಲಕ್ಷಣ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.
-ಮಗು ಅನಾರೋಗ್ಯ ಪೀಡಿತವಾದಾಗ ಸ್ವಯಂ ಸೇವೆ ಮಾಡದೇ ವೈದ್ಯರ ಸಲಹೆ ಪಡೆದು ಔಷಧಿ ನೀಡಬೇಕು.
-ಒಂದು ವೇಳೆ ಕೆಮ್ಮು ನಿಯಂತ್ರಿಸಲು ಆಗದ ಸ್ಥಿತಿಯಲ್ಲಿದ್ದರೆ ವೈದ್ಯರ ಸಲಹೆ ಪಡೆದು ಔಷಧಿ ನೀಡಬೇಕು.
-ಆದರೆ ಯಾವುದೇ ಸಿರಪ್ ನ್ನು ದೀರ್ಘ ಕಾಲ ಬಳಸಬಾರದು.
ಆರೋಗ್ಯ ಇಲಾಖೆಯ ಈ ಸಲಹೆಗಳನ್ನು ತಪ್ಪದೇ ಪಾಲಿಸಬೇಕು. ಇದು ಮಕ್ಕಳ ಹಿತದೃಷ್ಟಿಯಿಂದ ಜಾರಿಗೆ ತರಲಾಗಿದೆ.