ಗರ್ಭಿಣಿಯರು ಎದುರಿಸುವ ಸಾಮಾನ್ಯ ಸಮಸ್ಯೆಗಳಲ್ಲಿ ಮಲಬದ್ಧತೆಯೂ ಇಂದು. ಮಲಬದ್ಧತೆಯಾದರೆ ಗರ್ಭಿಣಿಯರು ಹೇಗೆ ನಿವಾರಿಸಬೇಕು ಇಲ್ಲಿದೆ ಕೆಲವು ಟಿಪ್ಸ್.
ಫೈಬರ್ ಅಂಶ ತೆಗೆದುಕೊಳ್ಳಿ: ಆಹಾರದಲ್ಲಿ ಫೈಬರ್ ಅಂಶ ಹೇರಳವಾಗಿರುವಂತೆ ನೋಡಿಕೊಳ್ಳಿ. ಪ್ರತಿನಿತ್ಯ 20-25 ಗ್ರಾಂನಷ್ಟು ಫೈಬರ್ ಅಂಶ ಸೇವಿಸಬೇಕು.
ನೀರಿನಂಶ ತೆಗೆದುಕೊಳ್ಳಿ: ದಿನಕ್ಕೆ 8 ರಿಂದ 12 ಕಪ್ ನೀರು ಅಥವಾ ನೀರಿನಂಶ ತೆಗೆದುಕೊಳ್ಳಬೇಕು. ದೇಹ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಬೇಕು.
ವ್ಯಾಯಾಮ ಮಾಡಿ: ದೇಹಕ್ಕೆ ಲಘುವಾದ ವ್ಯಾಯಾಮ ಸಿಗುವಂತೆ ನೋಡಿಕೊಳ್ಳಬೇಕು. ಪ್ರೆಗ್ನೆನ್ಸಿ ಎನ್ನುವುದು ಖಾಯಿಲೆ ಅಲ್ಲ. ಹೀಗಾಗಿ ಪ್ರತಿನಿತ್ಯ ಯೋಗ, ಲಘು ವ್ಯಾಯಾಮಗಳನ್ನು ಮಾಡುತ್ತಿರಿ.
ಟಾಯ್ಲೆಟ್ ಅಭ್ಯಾಸಗಳು: ಟಾಯ್ಲೆಟ್ ಗೆ ಹೋಗಬೇಕು ಎನಿಸಿದ ತಕ್ಷಣ ಕಟ್ಟಿ ಕೂರಬೇಡಿ. ತಕ್ಷಣವೇ ಹೋಗಿ. ಪ್ರತಿನಿತ್ಯ ಒಂದೇ ಸಮಯಕ್ಕೆ ಟಾಯ್ಲೆಟ್ ಗೆ ಹೋಗುವ ಅಭ್ಯಾಸ ಮಾಡಿ. ಆದಷ್ಟು ಇಂಡಿಯನ್ ಸ್ಟೈಲ್ ಟಾಯ್ಲೆಟ್ ಬಳಸಿ.
ಆದರೆ ಮಲಬದ್ಧತೆ ಸಮಸ್ಯೆ ತೀವ್ರವಾದಾಗ ಸ್ವಯಂ ಮದ್ದು ಮಾಡಲು ಹೋಗಬೇಡಿ. ಮಲವಿಸರ್ಜನೆ ವೇಳೆ ಸಹಿಸಲಾಗದ ನೋವು, ರಕ್ತ ಸ್ರಾವ ಇತ್ಯಾದಿ ಇದ್ದಾಗ ತಕ್ಷಣವೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ.