ಹಬ್ಬ ಹರಿದಿನಗಳಲ್ಲಿ ವ್ರತ ಮಾಡುವ ಸಲುವಾಗಿ ಉಪವಾಸ ಮಾಡುವವರು ಅನೇಕರಿದ್ದಾರೆ. ಉಪವಾಸ ಮುಗದ ತಕ್ಷಣ ಯಾವ ಆಹಾರ ಸೇವನೆ ಮಾಡಬೇಕು, ಯಾವುದನ್ನು ಸೇವನೆ ಮಾಡಬಾರದು ಇಲ್ಲಿದೆ ನೋಡಿ ವಿವರ.
ಉಪವಾಸ ಎನ್ನುವುದು ನಮ್ಮ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಒಮ್ಮೆ ರಿಫ್ರೆಶ್ ಮಾಡಿದಂತೆ. ಕೆಲವರು ಕೇವಲ ನೀರು ಮಾತ್ರ ಸೇವನೆ ಮಾಡಿಕೊಂಡು ದಿನವಿಡೀ ಉಪವಾಸ ಮಾಡುತ್ತಾರೆ. ಕೆಲವರು ಕೇವಲ ಹಣ್ಣು ಹಂಪಲುಗಳನ್ನು ಸೇವನೆ ಮಾಡುತ್ತಾರೆ. ಇದು ಅವರವರ ಭಕ್ತಿ-ಭಾವಕ್ಕೆ ಬಿಟ್ಟಿ ವಿಚಾರ. ಆದರೆ ಉಪವಾಸ ಮುಗಿದ ಬಳಿಕ ಏನು ಸೇವನೆ ಮಾಡಬೇಕು, ಮಾಡಬಾರದು ಎಂಬುದನ್ನು ತಿಳಿಯಬೇಕಾಗಿರುವುದು ಅಗತ್ಯ.
ಏನು ಸೇವನೆ ಮಾಡಬೇಕು?
ಉಪವಾಸದ ಸಂದರ್ಭದಲ್ಲಿ ಕೆಲವು ಹೊತ್ತು ಘನ ಆಹಾರಗಳನ್ನು ಸೇವನೆ ಮಾಡದೇ ನಿಮ್ಮ ಜೀರ್ಣಾಂಗ ವ್ಯವಸ್ಥೆ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಉಪವಾಸ ಮುಗಿದ ತಕ್ಷಣ ಘನ ಆಹಾರ ಸೇವನೆ ಮಾಡದೇ ಯಾವುದಾದರೂ ಲಘು ಉಪಹಾರ ಅಥವಾ ಸುಲಭವಾಗಿ ಜೀರ್ಣವಾಗುವ ಆಹಾರ ಸೇವನೆ ಮಾಡಬೇಕು. ಉದಾಹರಣೆ ಹಣ್ಣಿನ ರಸ, ಜ್ಯೂಸ್, ಮೊಸರು, ಮೊಟ್ಟೆಯ ಹಳದಿ ಭಾಗ, ಅವಕಾಡೊ ಹಣ್ಣು, ತರಕಾರಿ ಸೂಪ್ ಇತ್ಯಾದಿ ಮಾತ್ರ ಸೇವನೆ ಮಾಡಿ.
ಏನನ್ನು ಸೇವನೆ ಮಾಡಬಾರದು?
ಕ್ಯಾಂಡಿ, ಪೇಸ್ಟ್ರಿ, ಕೇಕ್ ನಂತಹ ಸಂಸ್ಕರಿತ ಆಹಾರಗಳು, ಪಾನೀಯ, ಅತಿಯಾದ ಕೊಬ್ಬು ಇರುವ, ಕರಿದ ತಿಂಡಿಗಳು, ಚಿಪ್ಸ್, ಪಾಸ್ತಾ, ಬೆಳ್ತಿಗೆ ಅನ್ನ, ಬ್ರಾಕೊಲಿ, ಕ್ಯಾಬೇಜ್ ನಂತಹ ಹಸಿ ತರಕಾರಿಗಳು, ಚಿಲ್ ಮಾಡಿದ ಆಹಾರ ವಸ್ತುಗಳು, ಕಾಫಿ, ಮದ್ಯ, ಹಾಟ್ ಡ್ರಿಂಕ್ಸ್ ಯಾವುದನ್ನೂ ಸೇವನೆ ಮಾಡದೇ ಇರುವುದು ಉತ್ತಮ.