Select Your Language

Notifications

webdunia
webdunia
webdunia
webdunia

ತೂಕ ಇಳಿಕೆಗೆ ಆಹಾರ ಮಾತ್ರವಲ್ಲ, ಈ ಮೂರು ಹಂತಗಳನ್ನು ತಪ್ಪದೇ ಅನುಸರಿಸಿ

Weight loss

Krishnaveni K

ಬೆಂಗಳೂರು , ಗುರುವಾರ, 25 ಸೆಪ್ಟಂಬರ್ 2025 (10:33 IST)
ಆಧುನಿಕ ಜೀವನ ಶೈಲಿಯಿಂದಾಗಿ ಅನೇಕರು ತೂಕ ಹೆಚ್ಚಳ ಸಮಸ್ಯೆಗೊಳಗಾಗಿದ್ದಾರೆ. ತೂಕ ಇಳಿಕೆಗೆ ಕೇವಲ ಆಹಾರ ಸೇವನೆಯಲ್ಲಿ ಪಥ್ಯ ಮಾಡಿದರೆ ಸಾಲದು. ಅಥವಾ ಕೇವಲ ಡಯಟ್ ನಿಂದಲೂ ತೂಕ ಇಳಿಕೆಯಾಗದು. ಇದಕ್ಕಾಗಿ ಈ ಮೂರು ಹಂತಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ.

  1. ಸಾವಕಾಶವಾಗಿ ಊಟ ಮಾಡಿ
ಸಾಮಾನ್ಯವಾಗಿ ಆಹಾರ ಸೇವನೆ ಬಗ್ಗೆಯೇ ಎಲ್ಲರೂ ಕಾಳಜಿವಹಿಸುತ್ತಾರೆ. ಎಂಥಾ ಆಹಾರ ಸೇವಿಸಬೇಕು ಎಂಬುದರ ಮೇಲಷ್ಟೇ ಗಮನ ಹರಿಸುತ್ತಾರೆ. ಆದರೆ ನಾವು ಅವಸರ ಅವಸರವಾಗಿ ತಿನ್ನದೇ ಸಾವಕಾಶವಾಗಿ ತಿನ್ನುವುದೂ ಅಷ್ಟೇ ಅಗತ್ಯ.
-ಊಟ ಸೇವನೆಗೆ ಕನಿಷ್ಠ 20 ನಿಮಿಷ ತೆಗೆದುಕೊಳ್ಳಿ.
-ಊಟ ಮಾಡುವಾಗ ಟಿವಿ, ಮೊಬೈಲ್ ಅವಾಯ್ಡ್ ಮಾಡಿ.
-ಆಹಾರದ ಸ್ವಾದ, ಕಲರ್, ರುಚಿಯ ಬಗ್ಗೆ ಗಮನ ಕೇಂದ್ರೀಕರಿಸಿ.

2. ಅತ್ಯುತ್ತಮ ವ್ಯಾಯಾಮ ಅಭ್ಯಾಸಗಳು
ವ್ಯಾಯಾಮ ಎಲ್ಲರೂ ಮಾಡುತ್ತಾರೆ. ಅದರಲ್ಲೂ ತೂಕ ಇಳಿಸಲು ಕಾರ್ಡಿಯೊ ಎಕ್ಸರ್ ಸೈಝ್ ಮಾಡುತ್ತಾರೆ. ಇದರಿಂದ ಕ್ಯಾಲೊರಿ ನಷ್ಟ ಮಾಡಬಹುದು ಎಂದು ಎಲ್ಲರಿಗೂ ಗೊತ್ತು. ಆದರೆ ಅದರ ಜೊತೆಗೆ ಈ ಅಂಶಗಳನ್ನು ಗಮನಿಸಿ.
-ದೇಹಕ್ಕೆ ಶಕ್ತಿ ಕೊಡುವ ದೈಹಿಕ ಕಸರತ್ತು ವಾರಕ್ಕೆ 2-3 ಬಾರಿ ಮಾಡಿ.
-ಜಿಮ್ ಮಾಡಲೇ ಬೇಕೆಂದಿಲ್ಲ. ಆದರೆ ಪುಷ್ ಅಪ್, ಶ್ವಾಸಕೋಶಕ್ಕೆ ಶಕ್ತಿ ಕೊಡುವಂತಹ ವ್ಯಾಯಾಮಗಳನ್ನು ಮಾಡಿ.
-ಪ್ರತಿನಿತ್ಯ 8,000-10,000 ಹೆಜ್ಜೆ ವಾಕಿಂಗ್ ಮಾಡಿ.
-ಕುಳಿತುಕೊಂಡೇ ಕೆಲಸ ಮಾಡುವವರು ಗಂಟೆಗೊಮ್ಮೆ ಎರಡು ಮೂರು ನಿಮಿಷ ವಾಕ್ ಮಾಡಿ.

  1. ನಿದ್ರೆ ಮತ್ತು ಒತ್ತಡ ನಿವಾರಣೆ
ನಿದ್ರೆ ಮತ್ತು ಒತ್ತಡ ನಮ್ಮ ದೇಹದ ಅನೇಕ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಹೀಗಾಗಿ ಈ ಎರಡೂ ಆರೋಗ್ಯಕರವಾಗಿರುವುದು ಮುಖ್ಯ.
-ಪ್ರತಿನಿತ್ಯ 7-9 ಗಂಟೆ ನಿದ್ರೆ ಮಾಡುವುದನ್ನು ತಪ್ಪಿಸಬೇಡಿ.
-ಯೋಗ, ಉಸಿರಾಟದ ವ್ಯಾಯಾಮ, ಪ್ರಾಣಾಯಾಮದ ಮೂಲಕ ಒತ್ತಡ ಕಡಿಮೆ ಮಾಡಿ.
-ಮನಸ್ಸಿಗೆ ಮುದ ಕೊಡುವ ಹವ್ಯಾಸ, ಸಂಗೀತ, ಓದಿನ ಕಡೆಗೆ ಗಮನ ಕೊಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಅತಿಯಾಗಿ ಸೀನು ಬರುತ್ತಿದ್ದರೆ ಏನು ಮಾಡಬೇಕು