ಇತ್ತೀಚೆಗಿನ ದಿನಗಳಲ್ಲಿ ಮುಟ್ಟಿನ ಸಮಯದಲ್ಲಿ ಮಹಿಳೆಯರು ನೋವು ಅನುಭವಿಸುವುದು ಸರ್ವೇ ಸಾಮಾನ್ಯವಾಗಿದೆ. ಈ ಸಮಯದಲ್ಲಿ ಈ ಕೆಲಸಗಳನ್ನು ಮಾಡದೇ ಇರುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಡುತ್ತಾರೆ.
ಹೊಟ್ಟೆಯ ನರಗಳೆಲ್ಲಾ ಎಳೆದಂತಾಗಿ, ಕಾಲುಗಳಲ್ಲಿ ಸೆಳೆತವಾದಂತಾಗಿ ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ತೀವ್ರ ನೋವು ಅನುಭವಿಸುತ್ತಾರೆ. ಕೆಲವರಿಗೆ ನೋವಿನಿಂದ ವಾಕರಿಕೆ, ತಲೆಸುತ್ತು ಬರುವ ಸಾಧ್ಯತೆಯೂ ಇರುತ್ತದೆ.
ಇಂತಹ ಸಂದರ್ಭದಲ್ಲಿ ದೈಹಿಕವಾಗಿ ಶ್ರಮವಹಿಸುವ ಚಟುವಟಿಕೆಗಳನ್ನು ಮಾಡದೇ ಇರುವುದು ಉತ್ತಮ. ದ್ವಿಚಕ್ರ ವಾಹನ ಪ್ರಯಾಣ, ಭಾರ ಎತ್ತುವ ಕೆಲಸಗಳು ನಿಮ್ಮ ಮುಟ್ಟಿನ ನೋವನ್ನು ಇನ್ನಷ್ಟು ಹೆಚ್ಚಿಸಬಹುದು. ಹೀಗಾಗಿ ಇವುಗಳನ್ನು ಅವಾಯ್ಡ್ ಮಾಡಿ.
ಇದಲ್ಲದೆ, ಈ ಸಮಯದಲ್ಲಿ ಕೆಫೈನ್ ಅಂಶ ಹೆಚ್ಚಿರುವ ಪಾನೀಯ, ಚಾಕಲೇಟ್ ಗಳ ಸೇವನೆ ಮಾಡಬೇಡಿ. ಇದು ನೋವು ಹೆಚ್ಚಿಸುತ್ತದೆ. ಅದೇ ರೀತಿ ಸಕ್ಕರೆ ಅಂಶ ಮತ್ತು ಉಪ್ಪಿನ ಅಂಶ ಅತಿಯಾಗಿ ಇರುವ ಆಹಾರ ಸೇವಿಸಬೇಡಿ. ಅದರ ಬದಲು ಬೆಲ್ಲ, ಎಳ್ಳು ಇತ್ಯಾದಿ ಆಹಾರಗಳು ದೇಹಕ್ಕೆ ಉತ್ತಮ.