ನಮ್ಮಲ್ಲಿ ಕೆಲವರಿಗೆ ತಿನ್ನುವುದೇ ಒಂದು ಅಭ್ಯಾಸ. ಆದರೆ ಪದೇ ಪದೇ ತಿನ್ನುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಎಷ್ಟು ಅಪಾಯಕಾರಿ ಗೊತ್ತಾ? ಇಲ್ಲಿದೆ ನೋಡಿ ವಿವರ.
ಕೆಲವರಿಗೆ ಟಿವಿ ನೋಡುವಾಗ ಅಥವಾ ಲ್ಯಾಪ್ ಟಾಪ್ ಮುಂದೆ ಕೂತು ಕೆಲಸ ಮಾಡುವಾಗ ಪಕ್ಕದಲ್ಲಿ ತಿನ್ನಲು ಏನಾದರೂ ಒಂದು ವಸ್ತು ಬೇಕೇ ಬೇಕು. ಮಕ್ಕಳಿಗೂ ಈ ಅಭ್ಯಾಸವಿರುತ್ತದೆ. ಕುರುಕಲು, ಇತರೆ ತಿಂಡಿ, ಆಹಾರ ವಸ್ತುಗಳು ಏನೇ ಇರಬಹುದು ಪದೇ ಪದೇ ತಿನ್ನುತ್ತಾ ಇರಬೇಕು.
ತಿನ್ನುವುದೂ ಒಂದು ಚಟವಾಗಿ ಬಿಟ್ಟಿರುತ್ತದೆ. ಆದರೆ ಇದು ನಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಪದೇ ಪದೇ ತಿನ್ನುವುದರಿಂದ ನಮ್ಮ ದೇಹ ಪದೇ ಪದೇ ಇನ್ಸುಲಿನ್ ಸ್ರವಿಸುವಿಕೆ ಮಾಡಬೇಕಾಗುತ್ತದೆ. ಇದರಿಂದ ಇದರ ಶಕ್ತಿ ಕುಂಠಿತವಾಗಬಹುದು.
ಮುಂದೆ ಮಧುಮೇಹದ ಸಮಸ್ಯೆ ಬರಬಹುದು. ಇನ್ನು, ಈಗಾಗಲೇ ಮಧುಮೇಹ ಇರುವವರಿಗೂ ಈ ರೀತಿ ಪದೇ ಪದೇ ತಿನ್ನುವ ಚಟವಿದ್ದರೆ ಅದು ನಿಮ್ಮ ಖಾಯಿಲೆಯನ್ನು ಉಲ್ಬಣಗೊಳಿಸಬಹುದು. ಹೀಗಾಗಿ ದಿನಕ್ಕೆ ಪದೇ ಪದೇ ಏನಾದರೂ ಒಂದು ತಿನ್ನುವ ಅಭ್ಯಾಸವನ್ನು ಬಿಡಿ.