Select Your Language

Notifications

webdunia
webdunia
webdunia
webdunia

ಡಾ ದೇವಿಪ್ರಸಾದ್ ಶೆಟ್ಟಿ ಪ್ರಕಾರ ತೂಕ ಇಳಿಕೆಗೆ ಎಷ್ಟು ಸಮಯ ತೆಗೆದುಕೊಳ್ಳಬೇಕು

Dr Deviprasad Shetty

Krishnaveni K

ಬೆಂಗಳೂರು , ಮಂಗಳವಾರ, 2 ಸೆಪ್ಟಂಬರ್ 2025 (10:43 IST)

ಇತ್ತೀಚೆಗಿನ ದಿನಗಳಲ್ಲಿ ಎಲ್ಲರೂ ತೂಕ ಇಳಿಕೆಗೆ ನಾನಾ ಸರ್ಕಸ್ ಮಾಡುತ್ತಿರುತ್ತಾರೆ. ಖ್ಯಾತ ವೈದ್ಯ ಡಾ ದೇವಿಪ್ರಸಾದ್ ಶೆಟ್ಟಿ ಪ್ರಕಾರ ತೂಕ ಇಳಿಸಲು ಎಷ್ಟು ಸಮಯ ತೆಗೆದುಕೊಳ್ಳಬೇಕು ಇಲ್ಲಿದೆ ಮಾಹಿತಿ.

ಕೆಲವರು ಬೇಗನೇ ತೂಕ ಕಳೆದುಕೊಳ್ಳಬೇಕು ಎಂದು ಅಡ್ಡದಾರಿಗಳನ್ನು ಹಿಡಿಯುತ್ತಾರೆ. ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ. ಡಾ ದೇವಿಪ್ರಸಾದ್ ಶೆಟ್ಟಿಯವರ ಪ್ರಕಾರ ಬೇಗನೇ ತೂಕ ಕಳೆದುಕೊಳ್ಳಲು ಪ್ರಯತ್ನಿಸಿದಲ್ಲಿ ಪಿತ್ತಕೋಶದಲ್ಲಿ ಕಲ್ಲಿನಂತಹ ಸಮಸ್ಯೆಗಳು ಬರಬಹುದು.

ಕೆಲವರು ಒಂದೇ ತಿಂಗಳಲ್ಲಿ ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಈ ರೀತಿ ಏಕಾ ಏಕಿ ತೂಕ ಕಳೆದುಕೊಳ್ಳಲು ಪ್ರಯತ್ನಿಸಬಾರದು. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುದು ಅವರ ಅಭಿಪ್ರಾಯ.

ಬೊಜ್ಜಿನ ಸಮಸ್ಯೆಯಿದ್ದರೆ ತೂಕ ಕಳೆದುಕೊಳ್ಳುವುದು ಉತ್ತಮ ದಾರಿಯೇ. ಆದರೆ ನಿಧಾನವಾಗಿ ತೂಕ ಕಳೆದುಕೊಳ್ಳಲು ಪ್ರಯತ್ನಿಸಬೇಕು. ಕನಿಷ್ಠ 5 ರಿಂದ 6 ತಿಂಗಳು ಸಮಯ ತೆಗೆದುಕೊಂಡಲ್ಲಿ ಆರೋಗ್ಯಕರ ಎನ್ನಬಹುದು ಎಂದು ಅವರು ಒಮ್ಮೆ ಸಂವಾದವೊಂದರಲ್ಲಿ ಹೇಳಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ರಷ್ಯನ್ ಆಯಿಲ್ ಜೊತೆಗೆ ಒಂದು ಕಟ್ಟು ದರ್ಬೆ, ಜನಿವಾರ ಫ್ರೀ: ಫುಲ್ ಟ್ರೋಲೋ ಟ್ರೋಲ್