ನವದೆಹಲಿ: ರಷ್ಯನ್ ಆಯಿಲ್ ಜೊತೆಗೆ ಒಂದು ಕಟ್ಟು ದರ್ಬೆ, ಜನಿವಾರ ಫ್ರೀ.. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಲಹೆಗಾರ ಪೀಟರ್ ನವಾರೋ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್ ಆಗುತ್ತಿದೆ.
ಭಾರತ-ರಷ್ಯಾ ನಿಕಟ ಸ್ನೇಹದಿಂದ ಹೊಟ್ಟೆ ಉರಿ ತಾಳಲಾರದೇ ಅಮೆರಿಕಾ ಹುಚ್ಚು ಹುಚ್ಚು ಹೇಳಿಕೆ ಬಿಡುಗಡೆ ಮಾಡುತ್ತಿದೆ. ಟ್ರಂಪ್ ಸಲಹೆಗಾರ ಪೀಟರ್ ನವಾರೋ ನಿನ್ನೆ ರಷ್ಯಾದಿಂದ ತೈಲ ಖರೀದಿಸಿ ಬ್ರಾಹ್ಮಣರು ಶ್ರೀಮಂತರಾಗುತ್ತಿದ್ದಾರೆ ಎಂದು ಜಾತಿ ಅಸ್ತ್ರ ಬಳಕೆ ಮಾಡಿದ್ದರು.
ಆದರೆ ಅವರ ಹೇಳಿಕೆಗೆ ಈಗ ಭಾರೀ ಟೀಕೆ ವ್ಯಕ್ತವಾಗಿದೆ. ಇದು ಭಾರತವನ್ನು ಜಾತಿ ಹೆಸರಿನಲ್ಲಿ ಒಡೆಯುವ ಯತ್ನ ಎಂದು ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಇದನ್ನೇ ಇಟ್ಟುಕೊಂಡು ಹಲವರು ತಮಾಷೆಯ ಮೆಮೆಗಳನ್ನು ಕ್ರಿಯೇಟ್ ಮಾಡುತ್ತಿದ್ದಾರೆ.
ಪೆಟ್ರೋಲ್ ಬಂಕ್ ನ ಚಿತ್ರ ಪ್ರಕಟಿಸಿ ಅದರ ಹೊರಗೆ ರಷ್ಯನ್ ಆಯಿಲ್ ಜೊತೆ 1 ಕಟ್ಟು ದರ್ಬೆ, ಜನಿವಾರ ಫ್ರೀ ಎಂದು ಬೋರ್ಡ್ ಹಾಕಿರುವಂತೆ ಚಿತ್ರೀಕರಿಸಲಾಗಿದೆ. ಇನ್ನೊಬ್ಬರು ಬ್ರಾಹ್ಮಣರಿಗೆ ಪುಕ್ಸಟೆಯಾಗಿ ರಷ್ಯಾ ನೀಡುತ್ತಿರುವ ತೈಲವನ್ನು ಯಾರಿಗೆ ಕೊಡ್ತಿದ್ದಾರೆ ಎಂದು ತಿಳಿಯಲು ಎಸ್ಐಟಿ ರಚನೆಯಾಗಬೇಕು ಎಂದು ತಮಾಷೆ ಮಾಡಿದ್ದಾರೆ. ಇನ್ಮುಂದೆ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದಲ್ಲಿ ಬ್ರಾಹ್ಮಣರಿಗೆ ಬಿಟ್ಟಿಯಾಗಿ ಸಿಗುತ್ತಿರುವ ತೈಲವನ್ನೇ ಅಭಿಷೇಕ ಮಾಡಲು ಆದೇಶಿಸಲಾಗಿದೆಯಂತೆ ಎಂದು ಟ್ರೋಲ್ ಮಾಡಿದ್ದಾರೆ.