Select Your Language

Notifications

webdunia
webdunia
webdunia
webdunia

CET Exam: ಜನಿವಾರ ಹಾಕಿದ್ದಕ್ಕೆ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲ: ವಿಡಿಯೋ

Brahmins CET exam

Krishnaveni K

ಬೆಂಗಳೂರು , ಶುಕ್ರವಾರ, 18 ಏಪ್ರಿಲ್ 2025 (09:03 IST)
ಬೆಂಗಳೂರು: ಜನಿವಾರ ಹಾಕಿದ್ದಕ್ಕೆ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆ ಬರೆಯಲು ಅವಕಾಶ ಕೊಡದಿರುವ ಘಟನೆ ನಡೆದಿದ್ದು, ಬ್ರಾಹ್ಮಣ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ಮತ್ತು ಬೀದರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಗಾಯತ್ರಿ ದಾರ ಮತ್ತು ಕೈಯಲ್ಲಿರುವ ಕಾಕಿದಾರವನ್ನು ಕಿತ್ತು ಹಾಕಲು ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ ಎಂದು ಪೋಷಕರು ದೂರು ನೀಡಿದ್ದರು.

ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಕಿತ್ತು ಹಾಕಿ ಅವಮಾನ ಮಾಡಲಾಗಿದೆ. ಇದರ ಬಗ್ಗೆ ಸ್ಥಳಕ್ಕೆ ಆಗಮಿಸಿದ ಬ್ರಾಹ್ಮಣ ಸಂಘಟನೆಗಳು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೇರೆ ಸಮುದಾಯದವರಾಗಿದ್ದರೆ ಈ ರೀತಿ ಮಾಡಲು ಬಿಡುತ್ತಿದ್ದಿರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ, ಬೀದರ್ ನ ಬ್ರಾಹ್ಮಣ ಸಂಘಟನೆಗಳು ಈ ಬಗ್ಗೆ ದೂರು ದಾಖಲಿಸಿವೆ. ಇದಾದ ಬಳಿಕ ಪ್ರತಿಕ್ರಿಯಿಸಿರುವ ಕೆಇಎ ಅಧಿಕಾರಿಗಳು ವರದಿ ಪಡೆಯುವುದಾಗಿ ಸ್ಪಷ್ಟನೆ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Mangalore Waqf protest: ನೇಮೋತ್ಸವ ಫ್ಲೆಕ್ಸ್ ತೆಗೆದು ವಕ್ಫ್ ಪ್ರತಿಭಟನೆ ಬೋರ್ಡ್ ಹಾಕಿದ್ದಕ್ಕೆ ಆಕ್ರೋಶ