Select Your Language

Notifications

webdunia
webdunia
webdunia
webdunia

Mangalore Waqf protest: ನೇಮೋತ್ಸವ ಫ್ಲೆಕ್ಸ್ ತೆಗೆದು ವಕ್ಫ್ ಪ್ರತಿಭಟನೆ ಬೋರ್ಡ್ ಹಾಕಿದ್ದಕ್ಕೆ ಆಕ್ರೋಶ

Mangalore waqf protest

Krishnaveni K

ಮಂಗಳೂರು , ಶುಕ್ರವಾರ, 18 ಏಪ್ರಿಲ್ 2025 (08:36 IST)
ಮಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ಕಾಯಿದೆ ವಿರೋಧಿಸಿ ಮಂಗಳೂರಿನಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಯಲಿದೆ. ಆದರೆ ಪ್ರತಿಭಟನೆಗೆ ಮುನ್ನ ವಿವಾದವೊಂದು ಹುಟ್ಟುಕೊಂಡಿದೆ. ಮಂಗಳೂರಿನ ಅಡ್ಯಾರಿನಲ್ಲಿ ನೇಮೋತ್ಸವದ ಫ್ಲೆಕ್ಸ್ ತೆರವುಗೊಳಿಸಿ ವಕ್ಫ್ ಪ್ರತಿಭಟನೆಗೆ ಆಗಮಿಸುತ್ತಿರುವ ಶಾಸಕ ಅಶೋಕ್ ರೈಗೆ ಸ್ವಾಗತ ಕೋರಿ ಬೋರ್ಡ್ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಬಗ್ಗೆ ಬಿಜೆಪಿ ಶಾಸಕ ಡಾ ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಕ್ಫ್  ಕಾಯ್ದೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಯುವ ಅಡ್ಯಾರು ಪ್ರದೇಶದಲ್ಲಿ ಹಿಂದೂ ಧಾರ್ಮಿಕ ನೇಮೋತ್ಸವಕ್ಕೆ ಹಾಕಲಾದ ಪತಾಕೆ ಬಂಟಿಂಗ್ ಗಳನ್ನು ತೆಗೆಯುವ ಪೊಲೀಸರ ಆದೇಶಕ್ಕೆ ಶಾಸಕರಾದ ಡಾ.ಭರತ್ ಶೆಟ್ಟಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದೇನು ಎ.18ರಂದು ಮಂಗಳೂರಿನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆಯೆ? ನೇಮೋತ್ಸವ ಮೊದಲೇ ನಿಗದಿಯಾಗಿ ಅದರಂತೆ ನಡೆಯುತ್ತಿದೆ.ಪ್ರತಿಭಟನೆ ಇರುವುದಾದರೆ ಕೇಸರಿ ಧ್ವಜ,ಬಂಟಿಂಗ್ ಯಾಕೆ ತೆಗೆಯಬೇಕು? ಎಂದು ಸರಕಾರದ ವಿರುದ್ದ ಕಿಡಿಕಾರಿದ್ದಾರೆ.

ಪೊಲೀಸರು ವಿನಾಕರಣ ಗೊಂದಲ,ಉದ್ವಿಗ್ನ ಸ್ಥಿತಿ ಇದೆ ಎಂಬಂತೆ ತೋರಿಸುತ್ತಿರುವುದು ಸರಿಯಲ್ಲ.ಹೆದ್ದಾರಿಯನ್ನೇ ಬಂದ್ ಮಾಡಿ ಏಕಮುಖ ಸಂಚಾರದ ತೀರ್ಮಾನವೂ ಒಪ್ಪತಕ್ಕದ್ದಲ್ಲ.
ಇವರ ಪ್ರತಿಭಟನೆ ಸರಕಾರದ ವಿರುದ್ದವೋ, ಅಥವಾ ಹಿಂದುಗಳ ವಿರುದ್ಧವೋ ? ಹಿಂದುಗಳಿಗೆ ಅವರ ನೇಮೋತ್ಸವ, ಧಾರ್ಮಿಕ ಆಚರಣೆ ಮಾಡಲು ಅವಕಾಶ ನೀಡಿ ಯಾವುದಕ್ಕೂ ಅಡ್ಡಿ ಬೇಡ ಎಂದು ಪೊಲೀಸ್ ಇಲಾಖೆಯನ್ನ ಒತ್ತಾಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಿಗೆ ಇದೆ ಮಳೆ ಸೂಚನೆ