Select Your Language

Notifications

webdunia
webdunia
webdunia
webdunia

ಡಾ ಪದ್ಮಿನಿ ಪ್ರಸಾದ್ ಪ್ರಕಾರ ಚಿಕ್ಕ ವಯಸ್ಸಿನಲ್ಲಿ ಗರ್ಭಿಣಿಯಾದ್ರೆ ಏನೆಲ್ಲಾ ತೊಂದರೆ

Padmini Prasad

Krishnaveni K

ಬೆಂಗಳೂರು , ಶನಿವಾರ, 13 ಸೆಪ್ಟಂಬರ್ 2025 (11:37 IST)
ಚಿಕ್ಕ ವಯಸ್ಸಿನಲ್ಲಿ ಗರ್ಭಿಣಿಯಾಗುವ ಸಂಖ್ಯೆ ಹೆಚ್ಚಾಗುತ್ತಿದೆ. ವಿವಾಹಪೂರ್ವ ಗರ್ಭಧಾರಣೆ ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ಹೀಗಾಗಿ ಚಿಕ್ಕ ವಯಸ್ಸಿನಲ್ಲಿ ಗರ್ಭಧಾರಣೆಯಾದರೆ ಯಾವೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ನೋಡಿ.

ದೇಹ ಇನ್ನೂ ಪ್ರಬುದ್ಧರಾಗದೇ ಇರುವಾಗ ಬೇಡದ ಗರ್ಭಧಾರಣೆಯಾದಾಗ ದೇಹಕ್ಕೆ ಮತ್ತು ಮನಸ್ಸಿಗೆ ಒತ್ತಡವುಂಟು ಮಾಡಿ ತಾಯಿಗೆ ಹಲವು ಆರೋಗ್ಯ ಸಮಸ್ಯೆ ಉಂಟಾಗಲು ಕಾರಣವಾಗಬಹುದು ಎಂದು ಸಂವಾದವೊಂದರಲ್ಲಿ ಡಾ ಪದ್ಮಿನಿ ಪ್ರಸಾದ್ ಹೇಳಿದ್ದರು.

ರಕ್ತ ಹೀನತೆ, ಗರ್ಭನಂಜು, ಡಯಾಬಿಟಿಸ್, ರಕ್ತದೊತ್ತಡ ಬರಬಹುದು. ಹುಟ್ಟುವ ಮಗುವಿನಲ್ಲೂ ಬೆಳವಣಿಗೆ ಕೊರತೆ, ಅಕಾಲ ಪ್ರಸವ, ಪ್ರಸವದ ಸಂದರ್ಭದಲ್ಲಿ ತೊಂದರೆಯಾಗುವುದು ಆಗಬಹುದು. ಸಹಜ ಪ್ರಸವಾಗದೇ ಇರಬಹುದು. ಆಗ ಸಿಸೇರಿಯನ್ ಆಗಬಹುದು. ಹುಟ್ಟಿದ ನಂತರವೂ ಮಗುವಿನಲ್ಲಿ ಬೆಳವಣಿಗೆ ಕೊರತೆ ಉಂಟಾಗಬಹುದು.

ಹೀಗಾಗಿ ಮಗು ಮತ್ತು ತಾಯಿಯಲ್ಲಿ ಅಡ್ಡಪರಿಣಾಮಗಳಾಗಬಹುದು. ಕೆಲವು ಸಂದರ್ಭಗಳಲ್ಲಿ ತಾಯಿಯ ಜೀವಕ್ಕೂ ಕುತ್ತಾಗಬಹುದು. ಅಲ್ಲದೆ, ಗರ್ಭಾಶಯದಲ್ಲಿ ಸೋಂಕು ಇತ್ಯಾದಿ ಸಮಸ್ಯೆಗಳೂ ಬರಬಹುದು. ಹೀಗಾಗಿ ಚಿಕ್ಕ ವಯಸ್ಸಿನಲ್ಲಿ ಗರ್ಭಧಾರಣೆ ಅಪಾಯಕಾರಿ.

Share this Story:

Follow Webdunia kannada

ಮುಂದಿನ ಸುದ್ದಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ