Select Your Language

Notifications

webdunia
webdunia
webdunia
webdunia

ರಾತ್ರಿ ಮಲಗುವ ಮುನ್ನ ಹೊಕ್ಕುಳಿಗೆ ಹರಳೆಣ್ಣೆ ಹಚ್ಚಿದ್ರೆ ಏನಾಗುತ್ತದೆ ಗೊತ್ತಾ

Castro oil

Krishnaveni K

ಬೆಂಗಳೂರು , ಮಂಗಳವಾರ, 23 ಸೆಪ್ಟಂಬರ್ 2025 (11:45 IST)
Photo Credit: X
ರಾತ್ರಿ ಮಲಗುವ ಮುನ್ನ ಮುಖ್ಯವಾಗಿ ಹೊಕ್ಕುಳಿನ ಭಾಗಕ್ಕೆ ಹರಳೆಣ್ಣೆ ಹಚ್ಚಿಕೊಂಡು ಮಲಗಿ. ಇದರಿಂದ ಎಷ್ಟೆಲ್ಲಾ ಉಪಯೋಗವಿದೆ ಎಂದು ಇಲ್ಲಿದೆ ನೋಡಿ ವಿವರ.

ಹೊಕ್ಕುಳಿನ ಭಾಗ ನಮ್ಮ ದೇಹದಲ್ಲಿ ಪ್ರಮುಖವಾದ ಭಾಗವಾಗಿದೆ. ಇದು ನರಮಂಡಲದ ಕೇಂದ್ರ ಭಾಗವೆಂದು ಕರೆಯಲ್ಪಡುತ್ತದೆ. ರಾತ್ರಿ ಮಲಗುವ ಮುನ್ನ ಈ ಭಾಗಕ್ಕೆ ಹರಳೆಣ್ಣೆ ಹಚ್ಚಿಕೊಂಡು ಮಲಗಿದರೆ ನಿದ್ರಾಹೀನತೆ, ದೇಹದ ಉಷ್ಣತೆ ಹೆಚ್ಚಾಗಿದ್ದರೆ, ಜೀರ್ಣ ಶಕ್ತಿ ಕುಂಠಿತವಾಗಿದ್ದರೆ ಸರಿಪಡಿಸಲು ನೆರವಾಗುತ್ತದೆ.

ಅದೇ ರೀತಿ ಹರಳೆಣ್ಣೆ ಚರ್ಮಕ್ಕೂ ಉತ್ತಮ. ಹೀಗಾಗಿ ನಾಭಿಗೆ ಹಚ್ಚಿ ಮಸಾಜ್ ಮಾಡಿ ಮಲಗುವುದರಿಂದ ನಿಮ್ಮ ತ್ವಚೆ ಕೋಮಲವಾಗಿರುತ್ತದೆ. ಇನ್ನು ದೇಹ ಉಷ್ಣತೆಯಿಂದಾಗಿ ಕಣ್ಣು ನೋವು, ಉರಿ, ಕೆಂಪಗಾಗುವುದು ಇತ್ಯಾದಿ ಸಮಸ್ಯೆಗಳೂ ದೂರವಾಗುತ್ತದೆ.

ಇಷ್ಟೇ ಅಲ್ಲದೆ, ಮಲಬದ್ಧತೆ ಸಮಸ್ಯೆಯಿರುವವರಿಗೂ ಇದು ಉತ್ತಮ. ದೇಹದಲ್ಲಿ ರಕ್ತದ ಪರಿಚಲನೆ ಸುಗಮವಾಗಿ ಮಾಡುತ್ತದೆ. ಹೀಗಾಗಿ ರಾತ್ರಿ ಮಲಗುವ ಮುನ್ನ ಹೊಕ್ಕುಳಿಗೆ ಹರಳೆಣ್ಣೆ ಹಚ್ಚಿ ಮಲಗಿದರೆ ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನುಗ್ಗೆ ಸೊಪ್ಪನ್ನು ನಾನ್‌ವೆಜ್ ಪ್ರಿಯರು ಈ ರೀತಿ ಟ್ರೈ ಮಾಡಲೇ ಬೇಕು